ಕೃತಿ: ಹಸುರು ಹೊನ್ನು
ಲೇ: ಬಿ.ಜಿ.ಎಲ್. ಸ್ವಾಮಿ
ಪ್ರ: ಕಾವ್ಯಾಲಯ, ಮೈಸೂರು
ಆರನೆಯ ಮುದ್ರಣ: ೨೦೦೭
ಪುಟಗಳು: ೪೧೧
ಬೆಲೆ: ರೂ. ೨೩೦
ಇತ್ತಿÃಚೆಗೆ ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಕೃತಿಯನ್ನು ಓದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವಾಮಿಯವರಿಗೆ ತಂದಿತ್ತ ಕೃತಿಯಿದು. ಸಸ್ಯಶಾಸ್ತçವನ್ನು ಸ್ನಾತಕೋತ್ತರ ಹಂತದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳನ್ನು ಕಾಡಿಗೆ ಪ್ರವಾಸ ಕರೆದುಕೊಂಡು ಹೋಗುವ ನಾಲ್ಕು ಸಂದರ್ಭಗಳನ್ನು ಸಂಯೋಜಿಸಿ ಬರೆದ ಕೃತಿಯಿದು. ಪ್ರವಾಸ ಕಥನದ ಒಳಗೆ ಸಸ್ಯಶಾಸ್ತçದ ಹೂರಣವನ್ನು ಹೊಂದಿರುವ ಕೃತಿಯಿದು. ದಕ್ಷಿಣ ಭಾರತದಲ್ಲಿ ಕಂಡುಬರುವ ಗಿಡಮರಬಳ್ಳಿಗಳನ್ನು ಪರಿಚಯಿಸುವುದು ಕೃತಿಯ ಉದ್ದೆÃಶ. ನಾಲ್ಕು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿ ನಾಲ್ಕುನೂರು ಪುಟಗಳಷ್ಟು ವಿಸ್ತಾರವಾಗಿದೆ. ನಾಲ್ಕೂ ಭಾಗಗಳಲ್ಲಿ ಪೀಠಿಕೆಯೆಂಬಂತೆ ‘ಗಾರ್ಧಭ ಪುರಾಣ’ವೊಂದು ಸೃಷ್ಟಿಯಾಗಿದೆ. ಕೂಲಿಯಾಳುಗಳ ದಿನಗೂಲಿ ಹೆಚ್ಚಾಯಿತೆಂದು ಪ್ರಿನ್ಸಿಪಾಲರು ಆಕ್ಷೆÃಪಿಸಿದಾಗ ಪ್ರಾಧ್ಯಾಪಕರು ಕೂಲಿಯಾಳುಗಳ ಬದಲಿಗೆ ಕತ್ತೆಗಳನ್ನು ಕೊಂಡುಕೊಂಡರೆ ಖರ್ಚು ಉಳಿಸ¨ಹುದೆಂಬ ಸಲಹೆ ನೀಡಿದ ಪರಿಣಾಮವಾಗಿ ಉಂಟಾದ ವಿನೋದಮಯ ಘಟನಾವಳಿಗಳೇ ಈ ‘ಗಾರ್ಧಭ ಪುರಾಣ’.
ಮೊದಲ ಭಾಗದ ಕೊನೆಯಲ್ಲಿರುವ ಅನುಬಂಧದಲ್ಲಿ ಸಸ್ಯ ಸಂಗ್ರಹಣೆಯ ವಿಧಾನಗಳನ್ನೂ, ಬಳಸಲಾಗುವ ಪರಿಕರಗಳನ್ನೂ ವಿವರಿಸುತ್ತಾರೆ. ಪ್ರವಾಸದ ಸಂದರ್ಭದಲ್ಲಿನ ವಿನೋದದ ಸಂದರ್ಭಗಳನ್ನು ರಸವತ್ತಾಗಿ ಚಿತ್ರಿಸಿದ್ದಾರೆ, ಸ್ವಾಮಿಯವರು. ವಿದ್ಯಾರ್ಥಿಗಳ ಅನನುಭವ, ಯಡವಟ್ಟುಗಳು ಮುಂತಾದವುಗಳನ್ನು ನಗೆಯುಕ್ಕಿಸುವ ಹಾಗೆ ಚಿತ್ರಿಸಿದ್ದಾರೆ. ಇದು ನೀರಸ ಪ್ರವಾಸ ಕಥನವಾಗಿರದೆ ಕಾದಂಬರಿಯಂಂತೆ ಓದಿಸಿಕೊಂಡುಹೋಗುತ್ತದೆ; ಕೇವಲ ಶಾಸ್ತç ಸಾಹಿತ್ಯ ಕೃತಿಯಾಗಿ ಉಳಿಯದೆ ಸೃಜನಶೀಲ ಕೃತಿಯಾಗಿ ಮೈದಳೆದಿದೆ; ಕನ್ನಡ ಸಾಹಿತ್ಯದ ಅಪೂರ್ವ ಕೃತಿರತ್ನಗಳಲ್ಲೊಂದಾಗಿದೆ. ಬಿದಿರು ನಮ್ಮ ಸಂಸ್ಕೃತಿಯ ಭಾಗವಾಗಿರುವುದನ್ನೂ, ಅರಳಿ ಮರವು ಹಿಂದೂ ಹಾಗೂ ಬೌದ್ಧ ಧರ್ಮಗಳಲ್ಲಿ ಹೊಂದಿರುವ ಸ್ಥಾನವನ್ನೂ ವಿವರಿಸುತ್ತಾರೆ. ಗಿಡಮರಗಳ ವರ್ಣನೆಯಲ್ಲದೆ ಅವುಗಳ ಔಷಧೀಯ ಉಪಯೋಗವನ್ನೂ ಸ್ವಾಮಿಯವರು ವಿವರಿಸುತ್ತಾರೆ. ಸಂಸ್ಕೃತ, ಕನ್ನಡ ಹಾಗೂ ತಮಿಳು ಕಾವ್ಯಗಳಲ್ಲಿ ಬಂದಿರುವ ಸಸ್ಯಗಳ ವರ್ಣನೆಗಳನ್ನು ಅಲ್ಲಲ್ಲಿ ಉಲ್ಲೆÃಖಿಸಿದ್ದಾರೆ. ಇದು ಅವರ ವಿಸ್ತಾರವಾದ ಸಾಹಿತ್ಯಾಧ್ಯಯನವನ್ನು ಸೂಚಿಸುತ್ತದೆ. ಕೊನೆಯಲ್ಲಿ ಕನ್ನಡ ಅಕಾರಾದಿ ಹಾಗೂ ಇಂಗ್ಲಿಷ್ ಅಕಾರಾದಿ ವಿಷಯಸೂಚಿಯನ್ನು ನೀಡಲಾಗಿದೆ. ಪುಸ್ತಕದಲ್ಲಿರುವ ಚಿತ್ರಗಳನ್ನು ಲೇಖಕರೇ ರಚಿಸಿದ್ದಾರೆ. ಸಸ್ಯಗಳ ಹೂವು, ಎಲೆ, ಕಾಯಿ, ಹಣ್ಣು ಮುಂತಾದ ಚಿತ್ರಗಳಲ್ಲದೆ ಪ್ರವಾಸದ ವೈನೋದಿಕ ಸಂದರ್ಭಗಳನ್ನೂ ತಮ್ಮ ರೇಖೆಗಳಲ್ಲಿ ಚಿತ್ರಿಸಿದ್ದಾರೆ. ಆರು ಛಾಯಾಚಿತ್ರಗಳೂ ಇವೆ. ೧೯೭೬ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಕೃತಿ ೨೦೦೭ರಲ್ಲಿ ಆರನೆಯ ಮುದ್ರಣ ಕಂಡಿದೆ. ಮೈಸೂರಿನ ಕಾವ್ಯಾಲಯ ಪ್ರಕಟಿಸಿರುವ ಈ ಕೃತಿಯ ಬೆಲೆ ೨೩೦ ರೂಪಾಯಿಗಳು.
-ತ. ನಂ. ಜ್ಞಾನೇಶ್ವರ
-ತ. ನಂ. ಜ್ಞಾನೇಶ್ವರ
No comments:
Post a Comment