ಇಂದು ಜಿಡ್ಡು ಕೃಷ್ಣಮೂರ್ತಿಯವರ ಬಗ್ಗೆ ಒಂದು ಪುಸ್ತಕ ಓದಿದೆ. ಸಂತೋಷ್ ಅನಂತಪುರ ಬರೆದಿರುವ ಕೃತಿಯನ್ನು ಬೆಂಗಳೂರಿನ ವಸಂತ ಪ್ರಕಾಶನವು 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಿಸಿದೆ. 75 ಪುಟಗಳಿರುವ ಈ ಪುಸ್ತಕದ ಬೆಲೆ ರೂ.35. ಒಳಪುಟಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರಗಳಿವೆ.
ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ ಒಬ್ಬ ಮುಕ್ತ ಮನಸ್ಸಿನ ಚಿಂತಕ. ಅವರ ಕೆಲವು ನುಡಿಗಳು ಇಲ್ಲಿವೆ:
ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ ಒಬ್ಬ ಮುಕ್ತ ಮನಸ್ಸಿನ ಚಿಂತಕ. ಅವರ ಕೆಲವು ನುಡಿಗಳು ಇಲ್ಲಿವೆ:
- ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲಪಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಥವಾ ಸಿದ್ಧಾಂತ ನಮ್ಮನ್ನು ಅಲ್ಲಿಗೆ ಕೊಂಡೊಯ್ಯುವುದಿಲ್ಲ.
- ನಿನಗೆ ನೀನೇ ಬೆಳಕು.
- ಬದುಕನ್ನು ಅದು ಹೇಗಿದೆಯೋ ಹಾಗೆ ಸ್ವೀಕರಿಸಿದಾಗ ಮಾತ್ರ ಎಲ್ಲಾ ಸಂಘರ್ಷ-ದ್ವಂದ್ವಗಳು ಕೊನೆಗೊಳ್ಳಬಲ್ಲವು.
No comments:
Post a Comment