Wednesday, March 29, 2017

ವಾಲ್ಮೀಕಿಯ ಭಾಗ್ಯ



ಕುವೆಂಪು ಅವರವಾಲ್ಮಿÃಕಿಯ ಭಾಗ್ಯ’ ನಾಟಕವನ್ನು ಓದಿದೆ. ನಾಟಕದಲ್ಲಿರುವುದು ಒಂದೇ ದೃಶ್ಯ; ಮೂರೇ ಪಾತ್ರಗಳು: ಲಕ್ಷ್ಮಣ, ಸೀತೆ, ವಾಲ್ಮಿÃಕಿ. “ಶ್ರಿÃರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿ ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನ್ನಿವೇಶವನ್ನು ಕುವೆಂಪು ಅವರು ಚಿತ್ರಿಸಿದ್ದಾರೆ. ಲಕ್ಷ್ಮೀಶನು ಪದ್ಯದಲ್ಲಿಯೂ, ಮುದ್ದಣನು ಗದ್ಯದಲ್ಲಿಯೂ ಸರಸಪ್ರೌಢವಾಗಿ ಬರೆದಿರುವ ಸನ್ನಿವೇಶವನ್ನು ಅನುಸರಿಸಿಯೆ ದೃಶ್ಯವನ್ನು ರಚಿಸಿರುವುದಾಗಿ ಕುವೆಂಪು ಅವರುವಿಜ್ಞಾಪನೆಯಲ್ಲಿ ಹೇಳಿಕೊಂಡಿದ್ದಾರೆ. “ದೃಶ್ಯ ಭಾಷೆ ಸಂಪೂರ್ಣವಾಗಿ ಗದ್ಯವೆಂದೇ ತಿಳಿಯಬೇಕು. ಅಭಿನಯಕಾರರಿಗಾಗಿಯೂ ನಾಟಕೀಯವಾಗಿ ಓದುವವರಿಗಾಗಿಯೂ ಪಂಕ್ತಿಗಳನ್ನು ವಿಭಾಗ ಮಾಡಿದೆ.” ಎಂದೂ ಹೇಳುತ್ತಾರೆ. ಕುವೆಂಪು ಅವರು ಸನ್ನಿವೇಶವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಓದುತ್ತಹೋದಂತೆ ನಾನು ಹನಿಗಣ್ಣಾದೆ. ೧೯೩೧ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಕೃತಿ ಉದಯರವಿ ಪ್ರಕಾಶನದಿಂದ ೨೦೦೫ರಲ್ಲಿ ನಾಲ್ಕನೆಯ ಮುದ್ರಣ ಕಂಡಿದೆ. ೨೨ ಪುಟಗಳ ಕೃತಿಯ ಬೆಲೆ ೨೫ ರೂಪಾಯಿಗಳು. ಕೃತಿಯನ್ನುಕಣಜ ಅಂತರ್ಜಾಲ ತಾಣದಲ್ಲಿಯೂ ಓದಬಹುದು: http://bit.ly/2hdNDRO ಆರ್ಕೈವ್ ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು ಕೊಂಡಿ ಬಳಸಿ: http://bit.ly/2hdEIzK

-. ನಂ. ಜ್ಞಾನೇಶ್ವರ

Sunday, March 26, 2017

ನಾ ಕಂಡಂತೆ ಸ್ವಾಮಿ ಪುರುಷೋತ್ತಮಾನಂದ

೧೯೯೦-೯೧ರಲ್ಲಿ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿದ್ದೆ. ಕುಣಿಗಲ್‌ನ ವಿವೇಕಾನಂದ ವಿಚಾರವೇದಿಕೆಯವರು ಸ್ವಾಮಿ ಪುರುಷೋತ್ತಮಾನಂದ ಅವರ ‘ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ’ಯ ಎರಡನೆಯ ಸಂಪುಟವಾದ ‘ವೀರಸಂನ್ಯಾಸಿ ವಿವೇಕಾನಂದ’ ಕೃತಿಯ ಮೊದಲ ೧೩ ಅಧ್ಯಾಯಗಳನ್ನು ನಿಗದಿಪಡಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ಪರೀಕ್ಷೆಯನ್ನು ಏರ್ಪಡಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಗಿರಿಗೌಡರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳವಂತೆ ಹೇಳಿ ಯಾರಿಗಾದರೂ ಪುಸ್ತಕ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ತಾವು ಪುಸ್ತಕವನ್ನು ಕೊಡುವುದಾಗಿ ತಿಳಿಸಿದರು. ನಾನು ಪುಸ್ತಕವನ್ನು ಕೊಂಡುಕೊಳ್ಳುವ ಸ್ಥಿತಿಯಲ್ಲಿಲ್ಲದ ಕಾರಣ ಅವರ ಕೊಠಡಿಗೆ ಹೋಗಿ ನನಗೆ ಪುಸ್ತಕ ಬೇಕೆಂದು ಕೇಳಿದೆ. ಮರುಕ್ಷಣದಲ್ಲಿಯೇ ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕೈಗಿತ್ತರು. (ಇನ್ನೊಮ್ಮೆ ಸ್ವಾಮೀಜಿಯವರು ಬರೆದಿದ್ದ ‘ವಿದ್ಯಾರ್ಥಿಗೊಂದು ಪತ್ರ’ ಎಂಬ ಪುಟ್ಟ ಪುಸ್ತಕವನ್ನು ಗಿರಿಗೌಡರು ಓದುತ್ತಿದ್ದರು. ಅದೇ ಸಮಯಕ್ಕೆ ನಾನು ದಿನಪತ್ರಿಕೆ ತೆಗೆದುಕೊಳ್ಳಲೆಂದು ಹೋದೆ. ಶ್ರೀ ಗಿರಿಗೌಡರು ತಾವು ಓದುತ್ತಿದ್ದ ಪುಸ್ತಕವನ್ನು ನನ್ನ ಕೈಗಿತ್ತು “ಈ ಪುಸ್ತಕವನ್ನು ಓದು” ಅಂದರು.) ಆ ಪುಸ್ತಕದ ಮೊದಲ ಪುಟವನ್ನು ಓದುತ್ತಿದ್ದಂತೆಯೇ ನನಗೆ ಬೇರೊಂದು ಪ್ರಪಂಚವೇ ತೆರೆದುಕೊಂಡಂತಾಯಿತು. ಪುರುಷೋತ್ತಮಾನಂದಜಿಯವರ ಭವ್ಯವಾದ ಶೈಲಿ ನನ್ನನ್ನು ಆಕರ್ಷಿಸಿತು. ಪುಸ್ತಕವನ್ನು ನಾಲ್ಕು ಬಾರಿ ಓದಿದೆ. ಜೊತೆಗೆ ನೋಟ್ಸ್ ಮಾಡಿದೆ ಕೂಡ. ಯಾವ ಪದ ಯಾವ ಪುಟದಲ್ಲಿದೆ ಎಂಬುದು ನನಗೆ ಗೊತ್ತಿತ್ತು. ಪರೀಕ್ಷೆಯಲ್ಲಿ ಸಮಯದ ಅಭಾವದಿಂದ ಕೊನೆಯ ಪ್ರಶ್ನೆಯನ್ನು ಪೂರ್ಣವಾಗಿ ಉತ್ತರಿಸಲಾಗಲಿಲ್ಲ. ಪರೀಕ್ಷೆಯ ಮಾರನೇ ದಿನ ಪುಸ್ತಕವನ್ನು ಮುಖ್ಯೋಪಾಧ್ಯಾಯರಿಗೆ ಹಿಂದಿರುಗಿಸಿದೆ.

ಒಂದು ದಿನ ವಿದ್ಯಾರ್ಥಿಗಳೆಲ್ಲ ಶಾಲೆ ಮುಗಿಸಿ ಮನೆಯ ಕಡೆ ಹೋಗುತ್ತಿದ್ದೆವು. ಆಗ ತಾನೇ ಬೆಲ್ ಹೊಡೆದಿತ್ತು. ಇನ್ನೂ ಶಾಲಾ ಮೈದಾನದಲ್ಲೇ ಇದ್ದೆವು. ಹಿಂದಿನಿಂದ ಯಾರೋ ಸ್ಕೂಟರಿನಲ್ಲಿ ಬಂದು "ಜ್ಞಾನೇಶ್ವರ ಯಾರು?" ಎಂದು ಕೇಳಿದರು. ಹಿಂದಿರುಗಿ ನೋಡಿದರೆ ವಿವೇಕಾನಂದ ವಿಚಾರವೇದಿಕೆಯ ಅಧ್ಯಕ್ಷರಾದ ಶಂಕರರಾಮಯ್ಯನವರು! (ಈಗ ‘ಸ್ವಾಮಿ ವೀರೇಶಾನಂದ’ ಎಂಬ ಅಭಿಧಾನದಿಂದ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿದ್ದಾರೆ.) “ನೀನು ವಿಶ್ವವಿಜೇತ ವಿವೇಕಾನಂದ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ಬಂದಿದ್ದಿ ಕಣಯ್ಯಾ!” ಎಂದು ಹೇಳಿದರು. ಆಗ ನಾನು ನೆಲದ ಮೇಲಿರಲಿಲ್ಲ!

ಕುಣಿಗಲ್‌ನಲ್ಲಿ ಬಹುಮಾನ ವಿತರಣಾ ಸಮಾರಂಭ ಏರ್ಪಾಡಾಯಿತು. ನನಗೂ ಒಂದು ಆಹ್ವಾನ ಪತ್ರಿಕೆ ನೀಡಲಾಯಿತು. ಸ್ವತಃ ಸ್ವಾಮಿ ಪುರುಷೋತ್ತಮಾನಂದರೇ ಬಹುಮಾನ ವಿತರಿಸಲು ಬಂದಿದ್ದರು. ಜಿ.ಕೆ.ಬಿ.ಎಂ.ಎಸ್. ಶಾಲೆಯ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭವಾಗಬೇಕಿದ್ದ ಸಮಯಕ್ಕೆ ಸಮಾರಂಭದಲ್ಲಿ ಕೆಲವೇ ಜನರಿದ್ದರು. ಪುರುಷೋತ್ತಮಾನಂದಜಿಯವರು ಕೋಲಾಟವನ್ನು ಆರಂಭಿಸಲು ಅಪ್ಪಣೆ ಕೊಡಿಸಿದರು. ತಡವಾಗಿ ಬಂದವರಿಗೆ ಕೋಲಾಟವನ್ನು ನೋಡುವ ಅವಕಾಶವನ್ನು ಕಳೆದುಕೊಂಡೆವೆಂದು ಪಶ್ಚಾತ್ತಾಪವಾಗಬೇಕು. ಇನ್ನೊಮ್ಮೆ ತಡವಾಗಿ ಬರದಿರಲು ಇದೊಂದು ಪಾಠವಾಗಬೇಕೆಂಬುದು ಪುರುಷೋತ್ತಮಾನಂದಜಿಯವರ ಎಣಿಕೆ. ಬೆಂಗಳೂರಿನ ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘದ ಮಕ್ಕಳು ಕೋಲಾಟ ನಡೆಸಿಕೊಟ್ಟರು. ಸ್ವಾಮೀಜಿಯವರ ಹಾಡಿಗೆ ಮಕ್ಕಳು ಕೋಲಾಟ ಪ್ರದರ್ಶಿಸಿದರು. ಅದೊಂದು ಅಪೂರ್ವ ಕಾರ್ಯಕ್ರಮ. ಅಂಥ ಕೋಲಾಟವನ್ನು ನಾನು ಬೇರೆಲ್ಲೂ ನೋಡಿಲ್ಲ. ಸ್ವಾಮೀಜಿಯವರು ಅಂದು ಹಾಡಿದ “ನಂದ ಲಾಲಿ ಗೋಪಿ ಕಂದ ಲಾಲಿ” ಎಂಬ ಹಾಡು ನನಗೆ ಇಂದಿಗೂ ನೆನಪಿದೆ. ಸ್ವಾಮೀಜಿ ಮಾತು ಆರಂಭಿಸಿದರು. “ಇಲ್ಲಿ ಸ್ವಾಮಿಗಳೊಬ್ಬರು ಮಾತಾಡ್ತಾ ಇದ್ದಾರೆ. ಅಲ್ಲಿ ಯಾರೋ ಬೀಡಿ ಸೇದ್ತಾ ಇದ್ದಾನೆ” ಎಂದರು. ಜನರೆಲ್ಲ ಹಿಂದೆ ತಿರುಗಿದರು. “ಆರಿಸಿಬಿಟ್ಟ ಬಿಡಿ” ಎಂದರು. ಮಾತು ಮುಂದುವರಿಸುತ್ತಾ, “ಕುಣಿಗಲ್‌ನಲ್ಲಿ ಕುದುರೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಂಡರೆ ಸಾಲದು; ಮನುಷ್ಯರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು” ಎಂದರು. ಕಾರ್ಯಕ್ರಮಕ್ಕೆ ಮಂಚೆ ಅವರನ್ನು ಕುದುರೆ ಫಾರಂಗೆ ಕರೆದುಕೊಂಡು ಹೋಗಿ ತೋರಿಸಲಾಗಿತ್ತು. ನಂತರ ತಮ್ಮ ಮೂವರು ಪುತ್ರರನ್ನು ಸಮಾಜಸೇವೆಗೆ ಸಮರ್ಪಿಸಿದ ಶಂಕರರಾಮಯ್ಯನವರ ತಂದೆತಾಯಿಗಳನ್ನು ಸ್ವಾಮೀಜಿಯವರು ಸನ್ಮಾನಿಸಿದರು.

ಕೆಲವು ದಿನಗಳ ನಂತರ ಹೆಬ್ಬೂರಿನ ವಿಪ್ರ ಶಿಕ್ಷಣ ಸಂಸ್ಥೆಯವರು ಸ್ವಾಮಿ ಪುರುಷೋತ್ತಮಾನಂದಜಿಯವರನ್ನು ಕರೆಸುವವರಿದ್ದರು. ನನಗೆ ಆಹ್ವಾನ ಬಂದಿತು. ವಿಪ್ರ ಶಿಕ್ಷಣ ಸಂಸ್ಥೆಯ ನಾಗರಾಜ್ ಅವರ ಮನೆಯಲ್ಲಿ ಸ್ವಾಮೀಜಿಯವರು ಕುರ್ಚಿಯ ಮೇಲೆ ಕುಳಿತಿದ್ದರು. ನನ್ನನ್ನು ಸ್ವಾಮೀಜಿಯವರ ಪಕ್ಕ ನಿಂತುಕೊಳ್ಳಲು ಹೇಳಿದರು. ಇನ್ನೊಂದು ಪಕ್ಕ ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದ ಹೆಬ್ಬೂರಿನ ಶೈಲಾ ಹಾಗೂ ವಿಪ್ರ ಶಿಕ್ಷಣ ಸಂಸ್ಥೆಯ ಪ್ರಭು ನಿಂತಿದ್ದರು. ಸ್ವಾಮೀಜಿ ತಮ್ಮ ಅಂಗಿಯ ತೋಳನ್ನು ಮಡಿಸಿಕೊಳ್ಳುತ್ತಿರುವಾಗಲೇ ಯಾರೋ ಫೋಟೋ ತೆಗೆದರು. “ಎಂಥ ಫೋಟೋಗ್ರಾಫರಯ್ಯಾ ನೀನು?” ಎಂದು ಸ್ವಾಮೀಜಿ ಛೇಡಿಸಿದರು. ಆಗ ಯೋಗ ಕಲಿಸುವವರೊಬ್ಬರು ಅಲ್ಲಿಗೆ ಬಂದರು. ಒಂದು ಫೈಲ್ ತೋರಿಸಿದರು. ಆಗ ಸ್ವಾಮೀಜಿ “ನನಗೆ ಫೈಲ್ ಬೇಡ. ಯೋಗ ಕಲಿತಿರುವವರನ್ನು ಕರೆಯಿರಿ. ಯೋಗ ಕಲಿತವರ ಮುಖದಲ್ಲಿ ವಿಶೇಷ ಕಳೆ ಇರಬೇಕು” ಎಂದರು. ನಂತರ ಕೋದಂಡಾಶ್ರಮ ಮಠಕ್ಕೆ ಹೋದೆವು. ಅಲ್ಲಿ ಒಬ್ಬರನ್ನು ಸ್ವಾಮೀಜಿಗೆ ಪರಿಚಯಿಸುತ್ತಾ “ಇವರು ‘ಕನ್ನಡ ಕಾಜಾಣ’ ಎಂಬ ಪುಸ್ತಕ ಬರೆದಿದ್ದಾರೆ” ಎಂದು ಅಲ್ಲಿದ್ದವರೊಬ್ಬರು ಹೇಳಿದರು. ಸ್ವಾಮೀಜಿಯವರು “ಕನ್ನಡ ಕಾ ಜಾಣ” ಎಂದು ಹೇಳಿ ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆದರು. ಸ್ವಾಮೀಜಿಯವರು ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆ ತೆಗೆದುಕೊಂಡಿದ್ದವರಿಗೆ ‘ವಿಶ್ವವಿಜೇತ ವಿವೇಕಾನಂದ’ ಕೃತಿಯ ಮುಖಪುಟದಲ್ಲಿದ್ದ ವಿವೇಕಾನಂದರ ಚಿತ್ರವನ್ನು ವಿತರಿಸಿದರು. ನಾನೂ ಒಂದನ್ನು ಪಡೆದುಕೊಂಡೆ. ಅದನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸಿ ಇಟ್ಟಿದ್ದೇನೆ.

ಪುರುಷೋತ್ತಮಾನಂದಜಿಯವರು ಇನ್ನೊಮ್ಮೆ ಕುಣಿಗಲ್‌ಗೆ ಬಂದಾಗ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಭಜನೆ ಪ್ರವಚನ ನಡೆಸಿಕೊಟ್ಟರು. “ಪರಬ್ರಹ್ಮನು ಒಬ್ಬನೇ ಇರುವುದು ಬೇಸರವೆಂಬ ಕಾರಣಕ್ಕೆ ಪ್ರಪಂಚವನ್ನು ಸೃಷ್ಟಿಸಿದನು” ಎಂದು ಹೇಳಿದರು. ಸ್ವಾಮೀಜಿಯವರ ಕಂಠ ತುಂಬ ಮಧುರವಾಗಿತ್ತು. ಶಂಕರರಾಮಯ್ಯನವರ ಮಾತಿನಲ್ಲಿ ಹೇಳುವುದಾದರೆ ‘ದೇವದುರ್ಲಭ ಕಂಠ’.

ಮುಂದಿನ ವರ್ಷ ಶಂಕರರಾಮಯ್ಯನವರು ತುಮಕೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವಿವೇಕಾನಂದ ವಿಚಾರವೇದಿಕೆಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದರು. ನಾನು ತುಮಕೂರಿನಲ್ಲಿ ಡಿಪ್ಲೊಮಾ ವ್ಯಾಸಂಗಕ್ಕೆ ಸೇರಿದ್ದರಿಂದ ಅವರ ಸಂಪರ್ಕದಲ್ಲಿದ್ದೆ. ಆ ವರ್ಷ ‘ವಿಶ್ವವಿಜೇತ ವಿವೇಕಾನಂದ’ ಪರೀಕ್ಷೆಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಯಿತು. ನಾನು ಈ ಬಾರಿ ಕಾಲೇಜು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದೆ.

ಒಮ್ಮೆ ಪುರುಷೋತ್ತಮಾನಂದಜಿಯವರು ತುಮಕೂರಿನ ಒಬ್ಬರ ಮನೆಗೆ ಭೇಟಿ ನೀಡಿದ್ದರು. ಆ ಮನೆಯ ಮಹಿಳೆ ಒಬ್ಬ ಮಗ ಮನೆ ಬಿಟ್ಟು ಹೋಗಿರುವುದಾಗಿ ಹೇಳಿ ತಮ್ಮ ಗೋಳು ತೋಡಿಕೊಂಡರು. ಸ್ವಾಮೀಜಿ “ಹೋದ ಮಗನಿಗಾಗಿ ಅಳುತ್ತಿದ್ದೀರಿ. ಇರುವ ಮಗನಿಗಾಗಿ ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.

ಒಮ್ಮೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯವರು ಹಾಡಿದ “ವಿದುರನ ಭಾಗ್ಯವಿದು” ಎಂಬ ಹಾಡು ನನ್ನನ್ನು ಬಹುವಾಗಿ ಆಕರ್ಷಿಸಿತು.

ಒಮ್ಮೆ ಶಂಕರರಾಮಯ್ಯನವರೊಂದಿಗೆ ಬೆಂಗಳೂರಿನ ರಾಮಕೃಷ್ಣಾಶ್ರಮಕ್ಕೆ ಹೋಗಿದ್ದೆ. ಸ್ವಾಮೀಜಿಯವರಿಗೆ “ಇವನ ಹೆಸರು ಜ್ಞಾನೇಶ್ವರ” ಎಂದು ನನ್ನನ್ನು ಪರಿಚಯಿಸಿದಾಗ “ಸಂತ್ ಜ್ಞಾನೇಶ್ವರ್ ಫಿಲ್ಮ್ ಇದೆ ನಮ್ಮಲ್ಲಿ” ಎಂದರು. ಅಂದು ಸಂಜೆ ಆಶ್ರಮದಲ್ಲಿ ಸ್ವಾಮೀಜಿಯವರ ಭಜನೆ ಕೇಳಿದೆ. ಭಜನೆಯ ನಂತರ ಮರುದಿನ ನರಸಿಂಹ ಬೆಟ್ಟದಲ್ಲಿ ಸತ್ಸಂಗ ಕಾರ್ಯಕ್ರಮವಿರುವುದಾಗಿ ಪ್ರಕಟಿಸಿ ಆಸಕ್ತರು ಸೀಟು ಕಾದಿರಿಸಿ ಎಂದರು. ಸೀಟು ಸಿಗದಿದ್ದವರು ಮನೆಗೆ ಹೋಗಿ ಕಾಫಿ ಕುಡಿಯಿರಿ ಎಂದು ಹೇಳಿ ತಮ್ಮ ಹಾಸ್ಯಪ್ರಜ್ಞೆಯನ್ನು ಪ್ರದರ್ಶಿಸಿದರು. ನರಸಿಂಹ ಬೆಟ್ಟದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ನನ್ನ ಜೀವನದಲ್ಲಿ ಮರೆಯಲಾರದ ಘಟನೆಯದು. ಅಂದು ಅನುಭವಿಸಿದ ಆನಂದವನ್ನು ಮತ್ತೆಂದೂ ಅನುಭವಿಸಿಲ್ಲ.

ನಾನು ಸ್ವಾಮೀಜಿಯವರ ‘ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ’ಯ ಮೂರೂ ಸಂಪುಟಗಳನ್ನು ಓದಿರುವುದಲ್ಲದೆ ಅವರ ಅನೇಕ ಕಿರುಹೊತ್ತಗೆಗಳನ್ನು ಓದಿದ್ದೇನೆ. ಅವರ ‘ಮಿಂಚಿನ ಗೊಂಚಲು’ ನನ್ನ ಮೇಲೆ ಮೋಡಿ ಮಾಡಿತ್ತು. ಒಮ್ಮೆ ‘ತರಂಗ’ದಲ್ಲಿ ‘ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕ’ ಎಂಬ ಲೇಖನ ಬರೆದಿದ್ದರು. ಇನ್ನೊಮ್ಮೆ ಅದೇ ಪತ್ರಿಕೆಯಲ್ಲಿ ‘ಮಂದಹಾಸವೇ ಅಂದ’ ಎಂಬ ಪುಟ್ಟಲೇಖನ ಬರೆದಿದ್ದರು. 
-ತ. ನಂ. ಜ್ಞಾನೇಶ್ವರ

Saturday, March 25, 2017

ನನ್ನ ಬೆನ್ನ ಹಿಂದಿನ ಗುರು ಪ್ರೊ. ಶ್ಯಾಮಸುಂದರ ಕೋಚಿ


ನಾನಾಗ ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿದ್ದೆ. ಶ್ಯಾಮಸುಂದರ ಕೋಚಿಯವರು ಕನ್ನಡ ರೀಡರ್ ಆಗಿದ್ದರು. ನಾನು ತಡವಾಗಿ ದಾಖಲಾಗಿದ್ದರಿಂದ ಲಂಕೇಶ್ ಅವರಗುಣಮುಖ ನಾಟಕವನ್ನು ಮುಕ್ಕಾಲುಭಾಗ ಮುಗಿಸಿದ್ದರು. ಕೊನೆಯಲ್ಲಿ ಒಂದು ಸೆಮಿನಾರ್ ಮಾಡೋಣವೆಂದು ಹೇಳಿ ನನಗೆ ಒಂದು ವಿಷಯವನ್ನು ಕೊಟ್ಟರು. ನಾನು ತಡವಾಗಿ ಕಾಲೇಜಿಗೆ ಸೇರಿದ್ದರಿಂದ ಅದಾಗಲೇ ಅಂಗಡಿಗಳಲ್ಲಿ ಪಠ್ಯಪುಸ್ತಕಗಳು ಮುಗಿದುಹೋಗಿದ್ದವು. ನಾನು ಪ್ರಬಂಧ ಬರೆಯುವ ಸಲುವಾಗಿ ಸಹಪಾಠಿಗಳ ಬಳಿ ಪುಸ್ತಕಕ್ಕಾಗಿ ಕೇಳಿದೆ. ಯಾರೂ ಕೊಡಲಿಲ್ಲ. ಕೋಚಿಯವರು ಅದುವರೆಗಿನ ಕಥೆಯನ್ನು ಸಿಂಹಾವಲೋಕನ ಕ್ರಮದಿಂದ ಹೇಳುತ್ತಿದ್ದುದರಿಂದ ನೆನಪಿನ ಆಧಾರದಿಂದ ಪ್ರಬಂಧವನ್ನು ಬರೆದೆ. ಮೂರ್ನಾಲ್ಕು ಹುಡುಗಿಯರು ಪ್ರಬಂಧ ಮಂಡಿಸಿದರು. ನಾನೂ ನನ್ನ ಪ್ರಬಂಧವನ್ನು ಓದಿದೆ. ಕೋಚಿಯವರುನಿಮ್ಮ ಪ್ರಬಂಧ solid ಆಗಿದೆ. ಶೈಲಿ ಚೆನ್ನಾಗಿದೆ. keep it up ಎಂದರು. ಒಮ್ಮೆ ನನ್ನನ್ನು ಹೊರತುಪಡಿಸಿ ನನ್ನ ತರಗತಿಯ ಯಾವ ವಿದ್ಯಾರ್ಥಿಯೂ ಕಾಲೇಜಿಗೆ ಬಂದಿರಲಿಲ್ಲ. ನಾನು ಕಾರಿಡಾರಿನಲ್ಲಿ ನಿಂತಿದ್ದೆ. ಕೋಚಿಯವರುಒಂದು ಪದ್ಯ ಚರ್ಚೆ ಮಾಡೋಣ ಬಾ ಎಂದರು. ನನಗೊಬ್ಬನಿಗೇ ತರಗತಿ ತೆಗೆದುಕೊಂಡರು. ಅಂದು ಕುವೆಂಪು ಅವರ 'ದೇವರು ರುಜು ಮಾಡಿದನು' ಕವಿತೆಯನ್ನು ಬೋಧಿಸಿದರು.

ಒಮ್ಮೆ ಸೂಚನಾ ಫಲಕದಲ್ಲಿ ವಿದ್ಯಾರ್ಥಿಗಳ ಕತೆ, ಕವನ ಇತ್ಯಾದಿಗಳನ್ನು ಪ್ರತಿಭಾಫಲಕದಲ್ಲಿ ಪ್ರಕಟಿಸಲಾಗುವುದೆಂದೂ, ಹೆಚ್ಚಿನ ವಿವರಗಳಿಗೆ ಶ್ಯಾಮಸುಂದರ ಕೋಚಿಯವರನ್ನು ಸಂಪರ್ಕಿಸುವುದೆಂದೂ ತಿಳಿಸಲಾಗಿತ್ತು. ನಾನು ನನ್ನ ಕವನವೊಂದನ್ನು ಕೋಚಿಯವರಿಗೆ ತೋರಿಸಿದೆ. ಓದಿ ನೋಡಿದ ಅವರುಚೆನ್ನಾಗಿದೆ. ಇನ್ನೂ ಕವನಗಳಿದ್ದರೆ ತನ್ನಿ ಎಂದರು. ಮರುದಿನ ಒಂದೆರಡು ಕವನಗಳನ್ನು ತೆಗೆದುಕೊಂಡುಹೋಗಿ ಕೊಟ್ಟೆ. ಒಂದು ದಿನ ಸಾರ್ವಜನಿಕ ಗ್ರಂಥಾಲಯದ ಕಡೆ ಹೋಗುತ್ತಿದ್ದೆ. ಎದುರಿನಿಂದ ಬರುತ್ತಿದ್ದ ಕೋಚಿಯವರುನಿನ್ನ ತಂದೆ ಏನು ಮಾಡುತ್ತಾರೆ?” ಎಂದರು. ನಾನುರೈತರು ಎಂದೆ. “ನಿನ್ನ ಕವನಗಳು ಚೆನ್ನಾಗಿವೆ. ಇನ್ನೊಂದಿಬ್ಬರ ಕವನಗಳನ್ನು ಸೇರಿಸಿ ಒಂದು ಕವನ ಸಂಕಲನ ತರೋಣ ಎಂದರು. ಇನ್ನೊಮ್ಮೆ ಕಾಲೇಜಿನಲ್ಲಿ ಇದೇ ವಿಷಯ ಪ್ರಸ್ತಾಪಿಸಿನಾನು ಒಂದು ಸಾವಿರ ರೂಪಾಯಿ ಹಾಕುತ್ತೇನೆ ಎಂದರು. ನಾನು ನನ್ನ ಪರಿಸ್ಥಿತಿ ವಿವರಿಸಿದೆ. ಕವನ ಸಂಕಲನ ಪ್ರಕಟಿಸುವ ತುರ್ತೂ ನನಗಿರಲಿಲ್ಲ. ನಂತರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ನನಗೆ ಕವನವೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದರು.

ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಹೊಸದಾಗಿ ಆರಂಭವಾಗಿದ್ದರಿಂದ ಖಾಯಂ ಉಪನ್ಯಾಸಕರಿರಲಿಲ್ಲ. ವರ್ಷ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಳ್ಳಬಾರದೆಂದು ಸರ್ಕಾರ ಆದೇಶ ಹೊರಡಿಸಿತು. ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನವಾಯಿತು. ಒಂದು ದಿನ ಕಾಲೇಜಿನ ವಾಚನಾಲಯದಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದೆ. ಕೋಚಿಯವರು ಬಾ ಎಂದು ಕರೆದರು. ನಾನು ಹಿಂಬಾಲಿಸಿದೆ. “ಬಿ.ಎಸ್ಸಿ. ಬಿಟ್ಟು ತುಮಕೂರಿನಲ್ಲಿ ಬಿ..ಗೆ ಸೇರಿಕೊ. ಆಪ್ಷನಲ್ ಇಂಗ್ಲಿಷ್ ತಗೊ. ಮಧ್ಯಾಹ್ನ ನಮ್ಮ ಮನೆಯಲ್ಲೇ ಊಟ ಮಾಡು ಎಂದು ಹೇಳಿದರು. ನನ್ನ ಮನೆ ಕಡೆ ಪರಿಸ್ಥಿತಿಯು ತುಂಬ ಕೆಟ್ಟದಾಗಿದ್ದುದರಿಂದ ನಾನು ಟಿ.ಸಿ.ಎಚ್. ಸೇರಬೇಕೆಂದಿರುವುದಾಗಿ ತಿಳಿಸಿದೆ. ಆಗ ಅವರುಹುಟ್ಟನ್ನು ಯಾವ ಮರದಿಂದ ಬೇಕಾದರೂ ಮಾಡಬಹುದು. ದೋಣಿ ಮಾಡುವ ಮರದಲ್ಲಿ ಹುಟ್ಟು ಮಾಡುವುದು ಬೇಡ ಎಂದರು. ನಮ್ಮ ಮನೆಯಲ್ಲಿ ಬೆಂಬಲಿಸುತ್ತಾರೆಂಬ ಭರವಸೆ ಇಲ್ಲದ ಕಾರಣ ನಾನು ಅವರ ಸಲಹೆಯಂತೆ ನಡೆಯಲಾಗಲಿಲ್ಲ. ಬಗ್ಗೆ ನನಗೆ ಇಂದೂ ವಿಷಾದವಿದೆ.

ನಾನು ದ್ವಿತೀಯ ಬಿ.ಎಸ್ಸಿ.ಯಲ್ಲಿದ್ದಾಗ ನನಗೆ ಟಿ.ಸಿ.ಎಚ್. ಸೀಟು ಸಿಕ್ಕಿತು. ಕೋಚಿಯವರಿಗೆ ವಿಷಯ ತಿಳಿಸಲು ಹೋದೆ. “ದುಡ್ಡು ಗಿಡ್ಡು ಏನಾದರೂ ಬೇಕಾಗಿತ್ತೇನು?” ಎಂದು ಕೇಳಿದರು. “ಎರಡು ಸಾವಿರ ರೂಪಾಯಿ ಬೇಕಾಗಿತ್ತು ಎಂದೆ. “ನಾಳೆ ತುಮಕೂರಿಗೆ ಬಾ ಕೊಡುತ್ತೇನೆ ಎಂದರು. ಮಾರನೆಯ ದಿನ ಹಣ ಕೊಟ್ಟು ಪ್ರತಿ ತಿಂಗಳು ನೂರು ರೂಪಾಯಿ ಕಳಿಸುವುದಾಗಿ ತಿಳಿಸಿದರು. ನನಗೆ ಮೈಸೂರಿನ ಡಯೆಟ್ನಲ್ಲಿ ಸೀಟು ಸಿಕ್ಕಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಕೆ. ಕೆಂಪೇಗೌಡ ಅವರಿಗೆ ಪತ್ರವೊಂದನ್ನು ಬರೆದುಕೊಟ್ಟರು. ಅಲ್ಲದೆ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಕೆ. ಎಸ್. ಭಗವಾನ್ ಅವರನ್ನೂ, ಯುವರಾಜ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ವೈ.ಸಿ. ನಂಜುಂಡಯ್ಯನವರನ್ನೂ ಭೇಟಿ ಮಾಡಲು ತಿಳಿಸಿದರು. “ರಂಗಾಯಣದಲ್ಲಿ ನಾಟಕ ನೋಡು. ಆಕಾಶವಾಣಿಯಲ್ಲಿ ಭಾಷಣ ಮಾಡು ಎಂದು ಹೇಳಿದರಲ್ಲದೆ ರಂಗಾಯಣದ ಉಪನಿರ್ದೇಶಕರಾಗಿದ್ದ ವಾಲಿಯವರನ್ನು ಭೇಟಿ ಮಾಡಲು ತಿಳಿಸಿದರು. ಟಿ.ಸಿ.ಎಚ್. ಸೇರಿ ಮೂರು ತಿಂಗಳಾಗಿತ್ತು. ಡಾ. ವೈ.ಸಿ. ನಂಜುಂಡಯ್ಯನವರು ನಾನಿದ್ದ ಹಾಸ್ಟೆಲಿಗೆ ಬಂದು ಕೋಚಿಯವರು ಮುನ್ನೂರು ರೂಪಾಯಿ ಹಣವನ್ನು ಕಳಿಸಿರುವುದಾಗಿ ತಿಳಿಸಿ ಕೊಟ್ಟು ಹೋದರು. ನನಗೆ ತೊಂದರೆಯಾದಾಗ ಪತ್ರ ಬರೆದರೆ ನೂರು ರೂಪಾಯಿ ಕಳಿಸುತ್ತಿದ್ದರು. ನನಗೆ ಕೆಲಸ ಸಿಕ್ಕಿದ ಮೇಲೆ ಎರಡು ಸಾವಿರ ರೂಪಾಯಿಗಳನ್ನು ಕೊಡಲು ವರ ಮನೆಗೆ ಹೋದೆ. ಅವರು ತೆಗೆದುಕೊಳ್ಳಲು ನಿರಾಕರಿಸಿದರು

ಒಮ್ಮೆ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆಂದು ಹೇಳಿದೆ. “ನೀನು ಹೈಸ್ಕೂಲ್ಗೆ ಹೋಗಬೇಡ. ನೆಟ್ ಎಕ್ಸಾಮ್ ತಗೋ ಎಂದರು. ಫೋನ್ ಮಾಡಿದಾಗಲೆಲ್ಲಾನಿನ್ನ ಎಂ.. ಎಲ್ಲಿಗೆ ಬಂತು?” ಎಂದು ಕೇಳುತ್ತಿದ್ದರು. ಅವರ ಒತ್ತಾಸೆಯೇ ನನ್ನ ಸಾಧನೆಗೆ ಸ್ಫೂರ್ತಿ.

-.ನಂ. ಜ್ಞಾನೇಶ್ವರ