ಕಲಾಂ ಆತ್ಮಕಥೆ
ಅಬ್ದುಲ್ ಕಲಾಂ
ಅವರ ಆತ್ಮಕಥೆ
Wings of Fire
ಅನ್ನು ಓದಿದೆ.
೧೯೯೯ರಲ್ಲಿ ಮೊದಲ
ಬಾರಿಗೆ ಪ್ರಕಟವಾಗಿರುವ
ಈ ಕೃತಿ
೨೦೧೫ರಲ್ಲಿ ೪೯ನೆಯ
ಮುದ್ರಣ ಕಂಡಿರುವುದೇ
ಈ ಕೃತಿಯ
ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಯೂನಿವೆರ್ಸಿಟೀಸ್ ಪ್ರೆಸ್
ಈ ಕೃತಿಯನ್ನು
ಪ್ರಕಟಿಸಿದೆ. ಹೈದರಾಬಾದಿನ
ಡಿಆರ್ಡಿಎಲ್ನಲ್ಲಿ ದಶಕಕ್ಕೂ ಹೆಚ್ಚು
ಕಾಲ ಕಲಾಂ
ಅವರೊಂದಿಗೆ ಕೆಲಸ
ಮಾಡಿದ ಅರುಣ್
ತಿವಾರಿಯವರು ಕೃತಿಯ
ನಿರೂಪಣೆ ಮಾಡಿದ್ದಾರೆ.
ಕೃತಿಯ ಆರಂಭದಲ್ಲಿ
ಕಲಾಂ ಅವರು
ರಚಿಸಿದ ‘My
Mother’ ಕವನವನ್ನು ಕೊಡಲಾಗಿದೆ.
ಪೀಠಿಕೆಯಲ್ಲಿ ಅರುಣ್
ತಿವಾರಿಯವರು “ಅಬ್ದುಲ್
ಕಲಾಂ ಅವರು
ನನಗೆ ನಿರೂಪಿಸಿದ
ಅನೇಕ ಘಟನೆಗಳಲ್ಲಿ
ಕೆಲವನ್ನು ಮಾತ್ರ
ಈ ಕೃತಿಯಲ್ಲಿ
ಸೇರಿಸಲು ಸಾಧ್ಯವಾಗಿದೆ”
ಎಂದು ಬರೆಯುತ್ತಾರೆ.
ಕೃತಿಯು Orientation, Creation, Propitiation ಮತ್ತು Contemplation
ಎಂಬ ನಾಲ್ಕು
ಭಾಗಗಳನ್ನು ಒಳಗೊಂಡಿದೆ.
ಆರಂಭದಲ್ಲಿ ಪರಿಚಯವೂ
ಕೊನೆಯಲ್ಲಿ ಉಪಸಂಹಾರವೂ
ಇವೆ. ೩೨
ಛಾಯಾಚಿತ್ರಗಳೂ, ೨
ವ್ಯಂಗ್ಯಚಿತ್ರಗಳೂ ಪುಸ್ತಕದಲ್ಲಿ
ಸೇರ್ಪಡೆಯಾಗಿವೆ. ಕಲಾಂ
ಅವರು ತಮ್ಮ
ಆತ್ಮಕಥೆಯುದ್ದಕ್ಕೂ ಅಲ್ಲಲ್ಲಿ
ಇಂಗ್ಲಿಷ್ ಕವಿಗಳ
ಕವನಗಳ ಸಾಲುಗಳನ್ನು
ಉಲ್ಲೇಖಿಸುತ್ತಾರೆ.
ಕೆಲವು ಕಡೆ
ತಮ್ಮದೇ ಕವನಗಳ
ಸಾಲುಗಳನ್ನು ಉದ್ಧರಿಸುತ್ತಾರೆ.
ವಿಜ್ಞಾನಿಯಾಗಿ ಕಲಾಂ
ಅವರ ಸಾಧನೆಗಳನ್ನೂ,
ವಿಫಲತೆಗಳನ್ನೂ ಪುಸ್ತಕವು
ಹಿಡಿದಿಡುತ್ತದೆ. ಸರಳವಾದ
ಭಾಷೆಯಲ್ಲಿ ನಿರೂಪಿತವಾಗಿರುವ
ಈ ಕೃತಿಯು
೧೮೦ ಪುಟಗಳನ್ನು
ಹೊಂದಿದೆ.
-ತ. ನಂ. ಜ್ಞಾನೇಶ್ವರ
No comments:
Post a Comment