- ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದಿಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು press meetನಲ್ಲಿ ಹೇಳಿದ್ದು: ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು ಎಂದರು.
- ವಿವೇಕ ರೈರವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ ಮಾಡಿದರು. ರೈಯವರು ಮನೆಗೇ ಬಂದು ಕೂತು ಕೇಳಿಕೊಂಡರು. ಇವರು ಸ್ವೀಕರಿಸಲೊಪ್ಪಲಿಲ್ಲ.
- ಮೈಸೂರು ವಿಶ್ವವಿದ್ಯಾನಿಲಯ 2004 ಜ. 22ರಂದು ನಡೆದ ಘಟಿಕೋತ್ಸವದಲ್ಲಿ ಆರ್.ಕೆ.ಲಕ್ಷ್ಮಣ್, ಎಚ್.ವೈ.ಶಾರದಾ ಪ್ರಸಾದ್, ಜಿ.ಎಸ್.ಶಿವರುದ್ರಪ್ಪ ಹಾಗೂ ತೇಜಸ್ವಿಗೂ ಗೌರವ ಡಾಕ್ಟರೇಟು ಕೊಡಲು ತೀರ್ಮಾನಿಸಿತ್ತು. ಆದರೆ ತೇಜಸ್ವಿ ಆ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದರು.
- 2005ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದವರೂ ಗೌರವ ಡಾಕ್ಟರೇಟು ಪದವಿ ಕೊಡುತ್ತೇವೆಂದರು. ಇವರು ಒಪ್ಪಿಕೊಳ್ಳಲಿಲ್ಲ. - ರಾಜೇಶ್ವರಿ, 'ನನ್ನ ತೇಜಸ್ವಿ' ಪು. 495-6
Monday, February 24, 2014
ತೇಜಸ್ವಿ ಮತ್ತು ಪ್ರಶಸ್ತಿ
Subscribe to:
Post Comments (Atom)
No comments:
Post a Comment