ಕಳೆದ ಶನಿವಾರ ಕುಣಿಗಲ್ ಗೆ ಹೋಗಿದ್ದೆ. ಮಾಜಿ ಸಹೋದ್ಯೋಗಿಯೊಬ್ಬ ಸಿಕ್ಕಿದ. ನಾನೇ ಮಾತನಾಡಿಸಿದೆ. ಆತ ನನ್ನ ಬೆನ್ನ ಹಿಂದೆ ಏನೋ ಆಡಿದನೆಂಬ ಕಾರಣಕ್ಕೆ ಆತನ ಮುಖ ಕಂಡರೆ ಆಗುತ್ತಿರಲಿಲ್ಲ. ನಾನು ಆ ಶಾಲೆ ಬಿಟ್ಟ ಮೇಲೆ ಕಹಿ ಭಾವನೆ ಕಡಿಮೆಯಾಗಿತ್ತು. ಆತ ಅಂದು ರಾತ್ರಿ ನನ್ನ ಭೇಟಿ ಆಗಿದ್ದು ಖುಷಿಯಾಯಿತೆಂದು ಮೆಸೇಜು ಮಾಡಿದ. ಆ ಮೆಸೇಜನ್ನು ನಾನು ಮಾರನೆಯ ದಿನ ನೋಡಿದೆ. ಆ ಕಡೆಯಿಂದ ಬಸ್ಸಿಗೆ ಕಾಯುತ್ತಿದ್ದಾಗ ಇನ್ನೊಬ್ಬ ಶಿಕ್ಷಕನನ್ನು ನನ್ನ ಇನ್ನೊಬ್ಬ ಮಾಜಿ ಸಹೋದ್ಯೋಗಿ ಪರಿಚಯಿಸಿದ. ಆತನನ್ನು ನಾನು ಗುರುತಿಸಲಿಲ್ಲ; ಅವನು ನನ್ನನ್ನು ಗುರುತಿಸಿದ. ನಾನು ಇಎಲ್ ಟಿ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡ. ಬಸ್ಸು ಹತ್ತಿದ ಮೇಲೆ ಕಂಡಕ್ಟರ್ ಮಾತನಾಡಿಸಿದ. ನಾನು, "ನಿಮಗೆ ನನ್ನ ಪರಿಚಯವಿದೆಯೇ?" ಎಂದು ಕೇಳಿದೆ. "ಅವತ್ತು ಫಂಕ್ಷನ್ ಗೆ ಬಂದಿದ್ನಲ್ಲ ಸಾರ್" ಎಂದ. ಈ ಮೂರು ಜನರಲ್ಲಿ ಎರಡನೆಯವನೊಂದಿಗಿನ ಭೇಟಿಯಿಂದ ನನ್ನ ಹೃದಯ ತುಂಬಿ ಬಂತು.
No comments:
Post a Comment