Monday, September 30, 2013

ಹುಡುಗಿಯರೊಂದಿಗೆ ಸಂವೇದನಾಶೀಲತೆಯಿಂದ.......

ಇಂದು 'ಸಮುದಾಯದತ್ತ ಶಾಲೆ' ಕಾರ್ಯಕ್ರಮಕ್ಕೆ ಮಾರ್ಗದರ್ಶಕನಾಗಿ ಹೋಗಿದ್ದೆ. ಮುಖ್ಯೋಪಾಧ್ಯಾಯರ ಮೇಜಿನ ಮೇಲೆ 'ಮೀನಾ' ಬಾನುಲಿ ಪಾಠದ ಪುಸ್ತಕವಿತ್ತು. ಓದಿದೆ. ಅದರಲ್ಲಿದ್ದ ಒಂದು ವಾಕ್ಯ ನನ್ನ ಗಮನ ಸೆಳೆಯಿತು: "ಹುಡುಗರಿಗೆ ಹುಡುಗಿಯರೊಂದಿಗೆ ಸಂವೇದನಾಶೀಲತೆಯಿಂದ ವರ್ತಿಸುವುದನ್ನು ಹಾಗೂ ಹುಡುಗಿಯರನ್ನು ಗೌರವಿಸುವುದನ್ನು ಹೇಳಿಕೊಡಬೇಕು".

Friday, September 27, 2013

ಹೃದಯ ತುಂಬಿ ಬಂತು

ಕಳೆದ ಶನಿವಾರ ಕುಣಿಗಲ್ ಗೆ ಹೋಗಿದ್ದೆ. ಮಾಜಿ ಸಹೋದ್ಯೋಗಿಯೊಬ್ಬ ಸಿಕ್ಕಿದ. ನಾನೇ ಮಾತನಾಡಿಸಿದೆ. ಆತ ನನ್ನ ಬೆನ್ನ ಹಿಂದೆ ಏನೋ ಆಡಿದನೆಂಬ ಕಾರಣಕ್ಕೆ ಆತನ ಮುಖ ಕಂಡರೆ ಆಗುತ್ತಿರಲಿಲ್ಲ.  ನಾನು ಆ ಶಾಲೆ ಬಿಟ್ಟ ಮೇಲೆ ಕಹಿ ಭಾವನೆ ಕಡಿಮೆಯಾಗಿತ್ತು. ಆತ ಅಂದು ರಾತ್ರಿ ನನ್ನ ಭೇಟಿ ಆಗಿದ್ದು ಖುಷಿಯಾಯಿತೆಂದು ಮೆಸೇಜು ಮಾಡಿದ. ಆ ಮೆಸೇಜನ್ನು ನಾನು ಮಾರನೆಯ ದಿನ ನೋಡಿದೆ. ಆ ಕಡೆಯಿಂದ ಬಸ್ಸಿಗೆ ಕಾಯುತ್ತಿದ್ದಾಗ ಇನ್ನೊಬ್ಬ ಶಿಕ್ಷಕನನ್ನು ನನ್ನ ಇನ್ನೊಬ್ಬ ಮಾಜಿ ಸಹೋದ್ಯೋಗಿ ಪರಿಚಯಿಸಿದ. ಆತನನ್ನು ನಾನು ಗುರುತಿಸಲಿಲ್ಲ; ಅವನು ನನ್ನನ್ನು ಗುರುತಿಸಿದ. ನಾನು ಇಎಲ್ ಟಿ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡ. ಬಸ್ಸು ಹತ್ತಿದ ಮೇಲೆ ಕಂಡಕ್ಟರ್ ಮಾತನಾಡಿಸಿದ. ನಾನು, "ನಿಮಗೆ ನನ್ನ ಪರಿಚಯವಿದೆಯೇ?" ಎಂದು ಕೇಳಿದೆ. "ಅವತ್ತು ಫಂಕ್ಷನ್ ಗೆ ಬಂದಿದ್ನಲ್ಲ ಸಾರ್" ಎಂದ. ಈ ಮೂರು ಜನರಲ್ಲಿ ಎರಡನೆಯವನೊಂದಿಗಿನ ಭೇಟಿಯಿಂದ ನನ್ನ ಹೃದಯ ತುಂಬಿ ಬಂತು.

Tuesday, September 10, 2013

ನೋವು ತೋಡಿಕೊಂಡದ್ದೇ ಅಪರಾಧ

ನೋವು ಕೊಟ್ಟದ್ದು ಅಪರಾಧವಾಗುವುದಿಲ್ಲ. ನೋವನ್ನು ಹಂಚಿಕೊಂಡದ್ದೇ ಅಪರಾಧವಾಗಿಬಿಡುತ್ತದೆ. ಶೋಷಿತರಿಗೆ ನೋವು ತೋಡಿಕೊಳ್ಳುವ ಸ್ವಾತಂತ್ರ್ಯವೂ ಇರುವುದಿಲ್ಲ. 

ಹೊಸ ಬ್ಲಾಗ್

ಹೊಸ ಬ್ಲಾಗ್ ಆರಂಭಿಸುತ್ತಿದ್ದೇನೆ. ಇದು ಬರಹಕ್ಕಷ್ಟೇ ಸೀಮಿತವಾಗಿರಲಿದೆ.