Saturday, March 7, 2020

ಕುಣಿಗಲ್ ನ ಹೆಮ್ಮೆಯ ಕುದುರೆ ಫಾರಂ



      ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಕುಣಿಗಲ್ ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟಡ್ ಫಾರ್ಮ್ ಭಾರತದ ಅತ್ಯಂತ ಹಳೆಯ ಕುದುರೆ ಸಾಕಾಣಿಕಾ ಕೇಂದ್ರ. ದೇಶದಲ್ಲಿ 40 ಪ್ರಮುಖ ಸ್ಟಡ್ ಫಾರ್ಮ್ಗಳಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಕುಣಿಗಲ್ ಸ್ಟಡ್ ಫಾರ್ಮ್ಗೆ ವಿದೇಶಗಳಿಂದಲೂ ಖರೀದಿಗೆ ಬರುತ್ತಾರೆ. ಪಾರಂಪರಿಕ ತಾಣವಾಗಿರುವ ಕುದುರೆ ಫಾರಂ ಕುಣಿಗಲ್ ಪ್ರಧಾನ ಆಕರ್ಷಣೆ ಹಾಗೂ ಪ್ರತಿಷ್ಠೆಯ ಸಂಕೇತವಾಗಿದೆ.

ಇತಿಹಾಸ
      ಮೈಸೂರು ಹುಲಿಟಿಪ್ಪು ಸುಲ್ತಾನ್ ಸ್ಟಡ್ ಫಾರ್ಮ್ ನಿರ್ಮಾತೃ ಎಂದು ಇತಿಹಾಸ ಹೇಳುತ್ತದೆ. ಟಿಪ್ಪು ತನ್ನ ಸೈನ್ಯಕ್ಕಾಗಿ ಅರೇಬಿಯನ್ ಕುದುರೆಗಳನ್ನು ಇಲ್ಲಿ ಸಾಕುತ್ತಿದ್ದ. ಮೈಸೂರು ಸಾಮ್ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡ ನಂತರ ಸ್ಟಡ್ ಫಾರ್ಮ್ ಬ್ರಿಟಿಷರ ಅಧೀನಕ್ಕೆ ಬಂದಿತು. ಬ್ರಿಟಿಷರು ತಮ್ಮ ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಸಾಕಲು ಫಾರ್ಮನ್ನು ಬಳಸಿಕೊಂಡರು. 1850ರಲ್ಲಿ ಆಫ್ರಿಕ ತಳಿಗಳನ್ನು ತರಿಸಿದರು. ಕಾಲದಲ್ಲಿ ಉಪಯೋಗಿಸಿದ ಬೀಜದ ಕುದುರೆಗಳು ಮುಖ್ಯವಾಗಿ ಶುದ್ಧತಳಿ ಅಂದುಕೊಂಡಿದ್ದ ಅರಬ್ಬೀ ಮತ್ತು ವೇಲರ್ ಜಾತಿಯವು. 1886ರಲ್ಲಿ ವಿದೇಶದಿಂದಪೆರೊ ಗೊಮೆಜ್’ (Pero Gomez) ಎಂಬ ಕುದುರೆಯನ್ನು ತರಿಸಲಾಯಿತು. ನಂತರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾಗಳಿಂದ ಕುದುರೆಗಳನ್ನು ತರಿಸಲು ಆರಂಭಿಸಿದರು. 1936ರಲ್ಲಿ ಜೆ.ಜೆ.ಮಲ್ಲಿಕ್ ಎಂಬ ಬ್ರಿಟಿಷ್ ಅಧಿಕಾರಿ ಫಾರ್ಮನ್ನು ಉತ್ತಮಗೊಳಿಸಲು ನಿಯಮಿತನಾದ. ಆತ ಸ್ಥಳೀಯ ಹೆಣ್ಣು ಕುದುರೆಗಳನ್ನೆಲ್ಲ ವಿಸರ್ಜಿಸಿ ರೇಸ್ಗೆ ಬೇಕಾದ ಕುದುರೆಗಳನ್ನು ಅಭಿವೃದ್ಧಿಪಡಿಸಿದ. ಇಲ್ಲಿ ಬೆಳೆಸಿದ ಕುದುರೆಗಳು ಇಂಗ್ಲೆಂಡ್, ಆಸ್ತ್ರೇಲಿಯಾಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ ನೀಡಿದವು. ವಿದೇಶಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ ನೀಡಿದ ಮೊದಲ ಸ್ವದೇಶಿ ಕುದುರೆ ಕುಣಿಗಲ್ ಫಾರ್ಮ್ನಲ್ಲಿ ಬೆಳೆಸಿದವೆಟ್’ (Yvette) ಎಂಬ ಕುದುರೆ. 1948ರಲ್ಲಿ ಫಾರ್ಮ್ ಮೈಸೂರು ಸರ್ಕಾರದ ವಶಕ್ಕೆ ಬಂದಿತು. ಪಶುಪಾಲನಾ ಇಲಾಖೆಯ ಅಧೀನದಲ್ಲಿ ಬಂದ ಅದರ ನಿರ್ವಹಣೆ ಕಷ್ಟವಾಯಿತು. ಲಾಭದ ಬದಲು ನಷ್ಟದ ಹಾದಿ ಹಿಡಿಯಿತು. ಬೆಂಗಳೂರು ಟರ್ಫ್ ಕ್ಲಬ್ಗೆ ಗುತ್ತಿಗೆ ನೀಡಲಾಯಿತಾದರೂ ನಿಭಾಯಿಸಲಾಗಲಿಲ್ಲ. ನಂತರ 1992ರಲ್ಲಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಯಿತು. ಉದ್ಯಮಿ ವಿಜಯ ಮಲ್ಯ ಒಡೆತನದ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ ಸಂಸ್ಥೆಗೆ 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಸಂಸ್ಥೆ ಸರ್ಕಾರಕ್ಕೆ ಪ್ರತಿವರ್ಷ 36 ಲಕ್ಷ ರೂ.ಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದೆ

ವರ್ತಮಾನ
      504 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಕುದುರೆ ಫಾರ್ಮ್ 64 ಎಕರೆ ಜಾಗವನ್ನು ಕೋರ್ಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಪ್ರಥಮ ದರ್ಜೆ ಕಾಲೇಜು ಮುಂತಾದ ಸೌಲಭ್ಯಗಳಿಗಾಗಿ ಈಗಾಗಲೇ ಬಿಟ್ಟುಕೊಟ್ಟಿದೆ. ಈಗ ಇರುವ ಜಾಗವನ್ನು ಬೇರೆ ಬೇರೆ ಅಳತೆಯ 25 ಪ್ಯಾಡಕ್(paddock)ಗಳಾಗಿ ವಿಂಗಡಿಸಲಾಗಿದೆ. ಅಮೆರಿಕ, ಬ್ರಿಟನ್ ಹಾಗೂ ಐರ್ಲ್ಯಾಂಡ್ ತಳಿಗಳನ್ನು ಇಲ್ಲಿ ಸಾಕಲಾಗುತ್ತಿದೆ.  ಪ್ರಸ್ತುತ 4 ಬೀಜದ ಕುದುರೆ, 166 ಮರಿಗಳು ಸೇರಿದಂತೆ 270 ಕುದುರೆಗಳು ಇವೆ. ಇದರಲ್ಲಿ ಅರ್ಧದಷ್ಟು ಮರಿಗಳನ್ನು ವಿಜಯ ಮಲ್ಯ ಅವರು ಸ್ವಂತ ರೇಸ್ಗಾಗಿ ಇಟ್ಟುಕೊಳ್ಳುತ್ತಾರೆ. ಉಳಿದ ಅರ್ಧದಷ್ಟು ಮರಿಗಳನ್ನು ಮಾರಾಟ ಮಾಡಲಾಗುತ್ತದೆ. ‘ಬೋಲ್ಡ್ ರಷ್ಯನ್’ (Bold Russian) ಎಂಬ ವಿದೇಶದಿಂದ ತರಿಸಿದ ಕುದುರೆ ಅಮೆರಿಕ ಹಾಗೂ ಇಂಗ್ಲೆಂಡ್ಗಳಲ್ಲಿ ನಡೆದ ಅನೇಕ ರೇಸ್ಗಳಲ್ಲಿ ಗೆದ್ದಿದೆ. ಬ್ರೇವ್ ಆಕ್ಟ್ (Brave Act) ಹಾಗೂ ತೇಜನೊ (Tejano) ವಿದೇಶದಿಂದ ತರಿಸಿದ ಇತರ ಮುಖ್ಯ ಕುದುರೆಗಳು. ಭಾರತದಲ್ಲೇ ಬೆಳೆಸಿದ ಆಡ್ಲರ್ ಎಂಬ ಕುದುರೆ ಭಾಗವಹಿಸಿದ 9 ರೇಸ್ಗಳಲ್ಲೂ ಜಯ ದಾಖಲಿಸಿದ ಹೆಗ್ಗಳಿಕೆ ಹೊಂದಿದೆ. ಕುದುರೆಗೆ ಅಮೆರಿಕದಲ್ಲಿ ನಡೆದ ರೇಸ್ನಲ್ಲಿ ಗೆದ್ದ ಭಾರತದಲ್ಲೇ ಬೆಳೆಸಲಾದ ಮೊದಲ ಕುದುರೆ ಎಂಬ ಹೆಗ್ಗಳಿಕೆಯೂ ಇದೆ. ಲಿಟ್ಲ್ ಓವರ್ (Littleover), ಸ್ಟಾರ್ ಫೈರ್ ಗರ್ಲ್ (Starfire Girl), ಸೂಪರ್ ವೈಟ್ (Supervite) ಎಂಬವು ರೇಸ್ಗಳಲ್ಲಿ ಗೆಲ್ಲುತ್ತಿರುವ ಹೆಣ್ಣು ಕುದುರೆಗಳಾಗಿವೆ. ಇದೇ ಫಾರ್ಮ್ನಲ್ಲೇ ಬೆಳೆಸಿದ ಸ್ಯಾಡ್ಡ್ಲ್ ಅಪ್ ಎಂಬ ಕುದುರೆ ಭಾರತದಲ್ಲೇ ಅಲ್ಲದೆ ಸಿಂಗಾಪುರ ಮತ್ತು ಮಲೇಷಿಯಾಗಳಲ್ಲೂ ಜಯ ದಾಖಲಿಸಿ ಆಲ್ ಏಷ್ಯನ್ ಚಾಂಪಿಯನ್ ಆಗಿದೆ. ‘ಬರ್ಡನ್ ಆಫ್ ಪ್ರೂಫ್’ (Burden of Proof) ಎಂಬ ಕುದುರೆಯ ಅನೇಕ ಮರಿಗಳು ರೇಸ್ಗಳಲ್ಲಿ ಗೆದ್ದಿವೆ. ‘ಬೆಂಗಳೂರು ರೇಸ್ ಸೀಸನ್ಸ್ಪರ್ಧೆಯಲ್ಲಿ 2006ರಲ್ಲಿ 31 ಹಾಗೂ 2007ರಲ್ಲಿ 39 ಗೆಲುವುಗಳನ್ನು ದಾಖಲಿಸುವ ಮೂಲಕ ಕುಣಿಗಲ್ ಸ್ಟಡ್ ಫಾರ್ಮ್ಲೀಡಿಂಗ್ ಸ್ಟಡ್ ಫಾರ್ಮ್ಪ್ರಶಸ್ತಿ ಪಡೆದಿದೆ

ಲಭ್ಯವಿರುವ ಸೌಲಭ್ಯಗಳು
      ರೇಸ್ ಕುದುರೆಗಳು, ಗಂಡು ಕುದುರೆ, ಹೆಣ್ಣು ಕುದುರೆಗಳಿಗೆ ಅಗತ್ಯಕ್ಕೆ ತಕ್ಕಂತೆ ಆಹಾರ ನೀಡಲಾಗುತ್ತದೆ. ಹಸಿರು ಹುಲ್ಲಿನ ಜೊತೆಗೆ ಜೋಳ, ಸೋಯಾ, ಬಾರ್ಲಿ, ಶಕ್ತಿ ಕೊಡುವ ಇತರ ಆಹಾರವನ್ನು ಕೊಡಲಾಗುತ್ತದೆ. ಕುಣಿಗಲ್ ನೆಲ ಕುದುರೆಗಳ ಸಾಕಾಣಿಕೆಗೆ ಸೂಕ್ತವಾಗಿದೆ. ಕುದುರೆಗಳು ಮೇಯಲು ಬೇಕಾದ ಹುಲ್ಲುಗಾವಲು ಹಾಗೂ  ಕುದುರೆಗಳ ಆಹಾರಕ್ಕೆ ಬೇಕಾದ ಆಲ್ಫಾಲ್ಫಾ, ಗ್ರೀನ್ ಓಟ್ಸ್ ಹಾಗೂ ರೋಡ್ಸ್ ಗ್ರ್ಯಾಸ್ ಬೆಳೆಸಲಾಗಿದೆ. ಒಳ್ಳೆಯ ಗುಣಮಟ್ಟದ ಆಸ್ಟ್ರೇಲಿಯನ್ ಓಟ್ಸ್ ಅನ್ನು ಕುದುರೆಗಳ ಆಹಾರಕ್ಕಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಕುದುರೆಗಳಿಗೆ ಬೇಕಾದ ಹಾಲು, ಮಜ್ಜಿಗೆಗಾಗಿ ಹಸುಗಳನ್ನು ಸಾಕಲಾಗಿದೆ. ಕುದುರೆಗಳಿಗಾಗಿ ಶುದ್ಧವಾದ ಕಡಿಯುವ ನೀರನ್ನು ಒದಗಿಸಲು ಫಿಲ್ಟರ್ ವ್ಯವಸ್ಥೆ ಇದೆ. ಕುದುರೆಗಳಿಗೆ ಪಶುವೈದ್ಯರ ಸೌಲಭ್ಯ ಒದಗಿಸಲಾಗಿದ್ದು ಪಶುವೈದ್ಯರನ್ನು ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಕುದುರೆಗಳಿಗೆ ತರಬೇತಿ ನೀಡಲು ಕುದುರೆ ಸವಾರಿ ತರಬೇತಿ ಶಾಲೆ ಇದೆ. 2007ರಲ್ಲಿ 3 ಕುದುರೆಗಳು ಓಡಲು ಅವಕಾಶವಿರುವ 7 ಫರ್ಲಾಂಗ್ ದೂರದ ಟ್ರ್ಯಾಕ್ ನಿರ್ಮಿಸಲಾಗಿದೆ. ಫಾರ್ಮ್ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು ಕೆಲಸ ಮಾಡುವ ಸಿಬ್ಬಂದಿಗಾಗಿ ವಸತಿ ಗೃಹಗಳಿವೆ. ಸ್ಟಡ್ ಫಾರ್ಮ್ ಆವರಣದಲ್ಲಿ ಮರದಿಂದ ನಿರ್ಮಿಸಲಾದ ಒಂದು ಭವ್ಯವಾದ ಗೆಸ್ಟ್ ಹೌಸ್ ಇದ್ದು ಅದು ಕೆಲವು ವರ್ಷಗಳ ಹಿಂದೆ ಸಿಡಿಲಿನ ಆಘಾತಕ್ಕೆ ಒಳಗಾಗಿ ನಾಶವಾಗಿತ್ತು. ನಂತರ ಅದನ್ನು ಮತ್ತೆ ಯಥಾವತ್ತಾಗಿ ನಿರ್ಮಿಸಲಾಗಿದೆ. ಗೆಸ್ಟ್ ಹೌಸಿನ ಮುಂದೆ ಒಂದು ಈಜುಕೊಳವಿದೆ. ಫಾರ್ಮಿನಲ್ಲಿ ಗಂಧದ ಮರಗಳೂ ಸೇರಿದಂತೆ ಶತಮಾನದಷ್ಟು ಹಳೆಯದಾದ ಮರಗಳಿವೆ. ಇತ್ತೀಚೆಗೆ ಸ್ಟಡ್ ಫಾರ್ಮ್ ಅನ್ನು ಕುಣಿಗಲ್ ಪಟ್ಟಣದ ಮೂಲಕ ಹಾದುಹೋಗಿರುವ ಬೆಂಗಳೂರು-ಹಾಸನ ಬ್ರಾಡ್ಗೇಜ್ ರೈಲು ಮಾರ್ಗವು 60:40 ಅನುಪಾತದಲ್ಲಿ ಇಬ್ಭಾಗವಾಗಿಸಿದೆ.


-.ನಂ. ಜ್ಞಾನೇಶ್ವರ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಲಹಳ್ಳಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ. ಪಿನ್: 584116 ಮೊ: 9164389346 -ಮೇಲ್: gnaneswaratn@gmail.com

Monday, January 21, 2019

ಅಂಬಿಗರ ಚೌಡಯ್ಯನ ವಚನಗಳು


ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೇ ತೂಗಿ ತೂಗಿ
ಟೊಕಟಕನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ
ಕಟ್ಟಿದ ಲಿಂಗ ಕಿರಿದು ಮಾಡಿ
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟೆ ಮೂಳರ ಕಂಡಡೆ
ಮೆಟ್ಟಿದ ಎಡದ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ

ನನ್ನ ಕುಲ ಹೆಚ್ಚು ನಿನ್ನ ಕುಲ  ಕಡಿಮೆ
ಎಂದು ಹೊಡೆದಾಡುವ ಅಣ್ಣಗಳನ್ನು
ಹಿಡಿದು ಮೂಗನೇ ಸವರಿ
ಮೆಣಸಿನ ಹಿಟ್ಟು ತುಪ್ಪವ ತುಂಬಿ
ನಮ್ಮ ಪಡಿಹಾರಿ ಉತ್ತಣ್ಣನ ವಾಮ ಪಾದುಕೆಯಿಂದ
ಫಡಫಡನೆ ಹೊಡೆಯಬೇಕೆಂದ ನಮ್ಮ ಅಂಬಿಗರ ಚೌಡಯ್ಯ

ಈಶ್ವರನನ್ನು ಕಾಂಬುದು ಒಂದು ಆಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ
ನಿನ್ನಲ್ಲಿ ನೀ ತಿಳಿದು ನೋಡಾ
ಜಗವು ನಿನ್ನೊಳಗೆ ಎಂತಾದ ಅಂಬಿಗರ ಚೌಡಯ್ಯ

ಉಚ್ಚೆಯ ಬಚ್ಚಲಲಿ ಹುಟ್ಟಿ
ನಾ ಹೆಚ್ಚು ನೀ ಹೆಚ್ಚು ಎಂಬುವವರನ್ನು
ಮಚ್ಚಿಲೆ ಹೊಡೆಯೆನ್ದ ಅಂಬಿಗರ ಚೌಡಯ್ಯ 

Monday, December 24, 2018

ಒಕ್ಕಲಿಗರ ಉಪಜಾತಿಗಳು

ಒಕ್ಕಲಿಗರಲ್ಲಿ ಈ ಕೆಳಕಂಡ  ಉಪಜಾತಿಗಳಿವೆ.

1  ಗಂಗಡಿಕಾರ ಒಕ್ಕಲಿಗ
2  ಕುಂಚಿಟಿಗ ಒಕ್ಕಲಿಗ
3. ದಾಸ ಒಕ್ಕಲಿಗ
4. ಕುಡು ಒಕ್ಕಲಿಗ
5. ಪಂಚಮಸಾಲಿ ಒಕ್ಕಲಿಗ
6. ಹಳ್ಳಿಕಾರ ಒಕ್ಕಲಿಗ
7. ನಾಮಧಾರಿ ಕುಂಚಿಟಿಗ ಒಕ್ಕಲಿಗ
8. ನಾಮಧಾರಿ ಒಕ್ಕಲಿಗ
9. ಮುಳ್ಳು ಒಕ್ಕಲಿಗ
10 ಗಂಗಕುಲ ಒಕ್ಕಲಿಗ
11.ಗಾವುಂಡ ಒಕ್ಕಲಿಗ
12 ಗೌಡ ಒಕ್ಕಲಿಗ
13.ಮೊರಸು ಒಕ್ಕಲಿಗ
14 ಮುಸುಕು ಒಕ್ಕಲಿಗ
15 ಬೆರಳ್ಕೊಡಗೆ ಒಕ್ಕಲಿಗ
16 ರೆಡ್ಡಿ ಒಕ್ಕಲಿಗ
17 ಕಾಪು ಕಮ್ಮ ಒಕ್ಕಲಿಗ
18 ಹಳೆ ಪೈಕಿ ಒಕ್ಕಲಿಗ
19 ಪಾಳ್ಯ ಒಕ್ಕಲಿಗ
20 ಪಾಳ್ಯದಸೀಮೆ ಒಕ್ಕಲಿಗ
21 ಕಾನುಸಾಲು ಒಕ್ಕಲಿಗ
22 ನೆರಳಗಟ್ಟದ ಒಕ್ಕಲಿಗ
23 ಕುತ್ತೇರುಸಾಲು ಒಕ್ಕಲಿಗ
24 ಭೈರೇದೇವರ ಒಕ್ಕಲಿಗ
25 ಹೊಸ ದ್ಯಾವ್ರು ಒಕ್ಕಲಿಗ
26 ಬಂಡಿ ದ್ಯಾವ್ರು ಒಕ್ಕಲಿಗ
27 ಊರದ್ಯಾವ್ರು ಒಕ್ಕಲಿಗ
28 ಭೈರವ ಒಕ್ಕಲಿಗ
29 ಪೆಟ್ಟಿಗೆ ಒಕ್ಕಲಿಗ
30 ಮೋಟಾಡು ಒಕ್ಕಲಿಗ
31 ಬೆಳ್ಳಿ ಒಕ್ಕಲಿಗ
32 ರೊದ್ದಗಾರು ಒಕ್ಕಲಿಗ
33 ರೆಡ್ಡಿಪೂಜಾರ ಒಕ್ಕಲಿಗ
34 ತೆಲುಗುಗೌಡ ಒಕ್ಕಲಿಗ
35 ನಾಮದರೆಡ್ಡಿ ಒಕ್ಕಲಿಗ
36 ಪಾಮರರೆಡ್ಡಿ ಒಕ್ಕಲಿಗ
37 ಲಿಂಗಧಾರಿ ಕುಂಚಿಟಿಗ ಒಕ್ಕಲಿಗ
38 ಎತ್ತಿನ ಕುಂಚಿಟಿಗ ಒಕ್ಕಲಿಗ
39 ಕಾಮಾಟಿ ಕುಂಚಿಟಿಗ ಒಕ್ಕಲಿಗ
40 ಕುಂಚ ಒಕ್ಕಲಿಗ
41 ನೊಣಬ ಒಕ್ಕಲಿಗ
42 ಸರ್ಪ ಒಕ್ಕಲಿಗ
43 ಚೋಳ ಒಕ್ಕಲಿಗ
44 ಶೆಟ್ಟಿಗಾರ ಒಕ್ಕಲಿಗ
45 ಏಳುಮನೆ ಒಕ್ಕಲಿಗ
46 ಭಂಟ ಒಕ್ಕಲಿಗ
47 ಮಲೇಗೌಡ ಒಕ್ಕಲಿಗ
48 ಉಪ್ಪಿನಕೊಳಗ ಒಕ್ಕಲಿಗ
49 ಹೇಮರೆಡ್ಡಿ ಒಕ್ಕಲಿಗ
50 ಸ್ವಲ್ಸ ಒಕ್ಕಲಿಗ
51 ಜೋತ್ರದ ಒಕ್ಕಲಿಗ
52 ಅರವೇದಿಗ ಒಕ್ಕಲಿಗ
53 ಮಾಳವ ಒಕ್ಕಲಿಗ
54 ಮಾಣಗ ಒಕ್ಕಲಿಗ
55 ತುಳುವ ಒಕ್ಕಲಿಗ
56 ಅಂಗಲಿಕ ಒಕ್ಕಲಿಗ
57 ಕುಳಿಬೆಡಗ ಒಕ್ಕಲಿಗ
58 ಪಾಂಡರು ಒಕ್ಕಲಿಗ
59 ಬೊಗ್ಗರು ಒಕ್ಕಲಿಗ
60 ನಾಡವಾರು ಒಕ್ಕಲಿಗ
61 ಬಂಡೇರು ಒಕ್ಕಲಿಗ
62 ಕುಳಲಿ ಒಕ್ಕಲಿಗ
63 ರಾಜಪುರಿ ಒಕ್ಕಲಿಗ
64 ಅನುಮ ಒಕ್ಕಲಿಗ
65 ಸಿಂಗರು ಒಕ್ಕಲಿಗ
66 ಏಳನಾಟಿ ಒಕ್ಕಲಿಗ
67 ಕೋದಾಟು ಒಕ್ಕಲಿಗ
68 ಕಾಕಿನಾಟ ಒಕ್ಕಲಿಗ
69 ತಂಡಗೌಡ ಒಕ್ಕಲಿಗ
70 ಮಡ್ಡರು ಒಕ್ಕಲಿಗ
71 ಮೊಗ್ಗದರು ಒಕ್ಕಲಿಗ
72 ಹೊಲಕಾಲು ಒಕ್ಕಲಿಗ
73 ದಾಸವಂಟಿಕೆ ಒಕ್ಕಲಿಗ
74 ದೊಡ್ಡಗಾಂಟಿ ಒಕ್ಕಲಿಗ
75 ಆಲಮಟ್ಟಿ ಒಕ್ಕಲಿಗ
76 ಕಂಪಲ ಒಕ್ಕಲಿಗ
77 ಕಮ್ಮೇರು ಒಕ್ಕಲಿಗ
78 ಗೋಸಂಗಿ ಒಕ್ಕಲಿಗ
79 ಕಪವಳ್ಳಿ ಒಕ್ಕಲಿಗ
80 ಶಂಕಜಾತಿ ಒಕ್ಕಲಿಗ
81 ಸಣ್ಣಗೊಂಡಿ ಒಕ್ಕಲಿಗ
82 ಹಳೆ ಒಕ್ಕಲು ಒಕ್ಕಲಿಗ
83 ವಾಲಿಗುಂಡ ಒಕ್ಕಲಿಗ
84 ದೇವನಮಕ್ಕಳು ಒಕ್ಕಲಿಗ
85 ಸಮುದ್ರಕುಲ ಒಕ್ಕಲಿಗ
86 ಕಮ್ಮನಾಡು ಒಕ್ಕಲಿಗ
87 ಹಾಲು ಒಕ್ಕಲಿಗ
88 ಹೆಗ್ಗಡೆ ಒಕ್ಕಲಿಗ
89 ಅಲಮಟ್ಠಿ ಒಕ್ಕಲಿಗ
90 ಕೊಂಕಣಿ ಒಕ್ಕಲಿಗ
91 ಯಾನೆ ಒಕ್ಕಲಿಗ
92 ದಕ್ಷಿಣ ಕನ್ನಡ ಒಕ್ಕಲಿಗ
93 ಉತ್ತರ ಕನ್ನಡ ಒಕ್ಕಲಿಗ
94 ಕೊಡಗುಗೌಡ ಒಕ್ಕಲಿಗ
95 ಅರೆಭಾಷೆ ಒಕ್ಕಲಿಗ
96 ಸಾದರ ಒಕ್ಕಲಿಗ
97 ನೀಲಗಿರಿ ಒಕ್ಕಲಿಗ
98 ತಮಿಳು ಗೌಂಡರ್ ಒಕ್ಕಲಿಗ
99 ಪಠಗಾರ ಒಕ್ಕಲಿಗ
100 ಕರಿ ಒಕ್ಕಲಿಗ
101 ಕೊಟ್ಟೆ ಒಕ್ಕಲಿಗ
102 ಹೊನ್ನೆ ಒಕ್ಕಲಿಗ
103 ಕುಂಬಿ ಒಕ್ಕಲಿಗ
104 ಬೆಳಕವಾಡಿ ಒಕ್ಕಲಿಗ
105 ಎಲ್ಲಮ್ಮಕಾಪು ಒಕ್ಕಲಿಗ
106 ಕೊಡಿಗೆಗೌಡ ಒಕ್ಕಲಿಗ
107 ಕೋಡು ಒಕ್ಕಲಿಗ
108 ತುಳೇರು ಒಕ್ಕಲಿಗ
109 ಗಾಮಗೌಡ ಒಕ್ಕಲಿಗ
110 ಕೆರೆ ಒಕ್ಕಲಿಗ
111 ಪಡಿಯಾಚಿ ಒಕ್ಕಲಿಗ
112 ಹಾಲಕ್ಕಿ ಒಕ್ಕಲಿಗ
113 ಅಟ್ಟಿಓಕ್ಕಲು  ಒಕ್ಕಲಿಗ
114 ನಾಡಗೌಡ ಒಕ್ಕಲಿಗ
115 ದೇಶಗೌಡ ಒಕ್ಕಲಿಗ
116 ವೆಲ್ಲಾಳ ಒಕ್ಕಲಿಗ
117 ಆರ್ಮುಂಡಿ ಒಕ್ಕಲಿಗ
118 ಪಾಂಡ್ಯ ಒಕ್ಕಲಿಗ
119 ಊಡಿಗಗೌಡ ಒಕ್ಕಲಿಗ
120 ನಾಯರ್ ಒಕ್ಕಲಿಗ
121 ಗೋನಾಬ ಒಕ್ಕಲಿಗ
122 ತೋಟಗಾರ ಒಕ್ಕಲಿಗ
123 ಸಪ್ಪೆ ಒಕ್ಕಲಿಗ
124 ಗೊಂಡ ಒಕ್ಕಲಿಗ
125 ಪಾಕನಾಕ ಒಕ್ಕಲಿಗ
126 ಪಣಯರು ಒಕ್ಕಲಿಗ
127 ಗದ್ಧಿಗರು ಒಕ್ಕಲಿಗ
128 ಮೋತಾಬಿ ಒಕ್ಕಲಿಗ
129 ಕೋಪಿ ಒಕ್ಕಲಿಗ
130 ಜಾಠ ಒಕ್ಕಲಿಗ
131 ಲಾಳಗೊಂಡ ಒಕ್ಕಲಿಗ
132 ಸಜ್ಜನ ಒಕ್ಕಲಿಗ
133 ಕುಡಿ ಒಕ್ಕಲಿಗ
134 ಗೊಂಡ ಒಕ್ಕಲಿಗ
135 ಕೊಡತಿ ಒಕ್ಕಲಿಗ

Tuesday, October 31, 2017

ಕನ್ನಡಪರ ಸೂಕ್ತಿಗಳು

1.    ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ -ಪಂಪ
2.    ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು -ಆಂಡಯ್ಯ
3.    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ -ಶ್ರೀ
4.    ಕನ್ನಡ ನುಡಿ, ನಮ್ಮ ಹೆಣ್ಣು, ನಮ್ಮ ತೋಟದಿನಿಯ ಹಣ್ಣು -ಶ್ರೀ
5.    ಕನ್ನಡಿಗರಿಗೆ ಕನ್ನಡವೇ ಗತಿ ಅನ್ಯಥಾ ಶರಣಂ ನಾಸ್ತಿ -ಶ್ರೀ
6.    ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು –ಗೋವಿಂದ ಪೈ
7.    ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ -ಸಾಲಿ ರಾಮಚಂದ್ರರಾಯರು
8.    ಕನ್ನಡದ ನೆಲದ ಕಲ್ಲೆನಗೆ ಶಾಲಿಗ್ರಾಮ ಶಿಲೆ -ಸಾಲಿ ರಾಮಚಂದ್ರರಾಯರು
9.    ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ -ಸಾಲಿ ರಾಮಚಂದ್ರರಾಯರು
10.    ಎನಿತು ಇನಿದು ಈ ಕನ್ನಡ ನುಡಿಯು –ಆನಂದಕಂದ
11.    ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು -ಹುಯಿಲಗೋಳ ನಾರಾಯಣರಾವ್
12.    ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ -ಬೆನಗಲ್ ರಾಮರಾವ್
13.    ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು –ಕುವೆಂಪು
14.    ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು –ಕುವೆಂಪು
15.    ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ –ಕುವೆಂಪು
16.    ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ! –ಕುವೆಂಪು
17.    ಕನ್ನಡಕೆ ಹೋರಾಡು ಕನ್ನಡದ ಕಂದ –ಕುವೆಂಪು
18.    ಬಾರಿಸು ಕನ್ನಡ ಡಿಂಡಿಮವ –ಕುವೆಂಪು
19.    ಕನ್ನಡವೇ ಸತ್ಯ, ಕನ್ನಡವೇ ನಿತ್ಯ –ಕುವೆಂಪು
20.    ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ; ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ; ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ. –ಕುವೆಂಪು
21.    ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು, ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ. –ಕುವೆಂಪು
22.    ಕನ್ನಡ ತಾಯಿಗೆ ಮಣಿವ ನಾವ್ ಕನ್ನಡಿಗರೆಂದು ಕುಣಿವ –ರಾಘವ
23.    ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ್ ಪದವಾಡ್ತೀನಿ -ಜಿ.ಪಿ.ರಾಜರತ್ನಂ
24.    ಹಚ್ಚೇವು ಕನ್ನಡದ ದೀಪ –ಡಿ.ಎಸ್.ಕರ್ಕಿ
25.    ಹೊತ್ತಿತೋ ಹೊತ್ತಿತು ಕನ್ನಡದ ದೀಪ -ಸಿದ್ಧಯ್ಯ ಪುರಾಣಿಕ
26.    ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ -ಚೆನ್ನವೀರ ಕಣವಿ
27.    ಕನ್ನಡ ರಾಜ್ಯದಲ್ಲಿ ಕನ್ನಡವೇ ಅಧಿದೇವತೆ, ಉಳಿದ ಭಾಷೆಗಳು ಪರಿವಾರ ಮಾತ್ರ. –ದೇ.ಜವರೇಗೌಡ
28.    ಕನ್ನಡ ನನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ. -ಹಾ.ಮಾ.ನಾಯಕ
29.    ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ –ಚಂಪಾ

Wednesday, April 19, 2017

ಕಾವೇರಿ ವಿವಾದ



ಪುಸ್ತಕದ ಹೆಸರು: ಕಾವೇರಿ ವಿವಾದ
ಪ್ರಕಾಶಕರು: ಕರ್ನಾಟಕ ಜನಪರ ವೇದಿಕೆ, ಬೆಂಗಳೂರು
ಪ್ರಕಟಣೆಯ ವರ್ಷ: ೨೦೦೭
ಪುಟಗಳು: ೬೦
ಬೆಲೆ: ರೂ. ೨೦/-
ಕಾವೇರಿ ವಿವಾದ ಎಂಬ ಪುಸ್ತಕವನ್ನು ಓದಿದೆ. ಪುಸ್ತಕವನ್ನು ಕರ್ನಾಟಕ ಜನಪರ ವೇದಿಕೆ ೨೦೦೭ರ ಫೆಬ್ರವರಿಯಲ್ಲಿ ಪ್ರಕಟಿಸಿದ್ದು ಒಂದು ತಿಂಗಳಲ್ಲೆÃ ಎಲ್ಲ ಪ್ರತಿಗಳು ಮುಗಿದುಹೋಗಿ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಎರಡನೇ ಆವೃತ್ತಿ ಪ್ರಕಟವಾಗಿದೆ. ೬೦ ಪುಟಗಳ ಕೃತಿಯು ಅಧ್ಯಾಯಗಳನ್ನೂ, ಅನುಬಂಧಗಳನ್ನೂ ಒಳಗೊಂಡಿದೆ. ಕೃತಿಯು ಕಾವೇರಿ ನದಿಯ ಭೌಗೋಳಿಕ ಪರಿಚಯ, ಕಾವೇರಿ ಜಲವಿವಾದದ ಹುಟ್ಟು, ಬೆಳವಣಿಗೆ, ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು, ಕರ್ನಾಟಕಕ್ಕೆ ಇದುವರೆಗೆ ಆಗಿರುವ ಅನ್ಯಾಯ, ಪರಿಹಾರೋಪಾಯಗಳು ಮುಂತಾದ ವಿಚಾರಗಳನ್ನು ಚರ್ಚಿಸುತ್ತದೆ. ಕಾವೇರಿ ಜಲವಿವಾದವು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪುದಚೇರಿ ಹೀಗೆ ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದ ವಿವಾದವಾಗಿದೆ. ಕಾವೇರಿಯು ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ೮೦೨ ಕಿ.ಮೀ. ಉದ್ದ ಹರಿಯುವ ಕಾವೇರಿಯು ಕರ್ನಾಟಕದಲ್ಲಿ ೩೮೧ ಕಿ.ಮೀ., ತಮಿಳುನಾಡಿನಲ್ಲಿ ೩೫೭ ಕಿ.ಮೀ. ಹಾಗೂ ಎರಡೂ ರಾಜ್ಯಗಳ ಗಡಿಯಲ್ಲಿ ೬೪ ಕಿ.ಮೀ. ಹರಿಯುತ್ತದೆ. ಕಾವೇರಿಗೆ ಕರ್ನಾಟಕವು ಶೇ. ೫೩, ತಮಿಳುನಾಡು ಹಾಗೂ ಪುದುಚೇರಿ ಶೇ. ೩೦ ಹಾಗೂ ಕೇರಳ ಶೇ. ೧೭ರಷ್ಟು ಕೊಡುಗೆ ನೀಡುತ್ತವೆ. ೧೮೯೨ರಲ್ಲಿ ಮದ್ರಾಸ್ ಸರ್ಕಾರವು ಮೈಸೂರು ಸಂಸ್ಥಾನದ ನೀರಾವರಿ ಪ್ರಸ್ತಾಪಗಳಿಗೆ ಆಕ್ಷೆÃಪಣೆ ಎತ್ತಿದ ಪರಿಣಾಮವಾಗಿ ೧೮೯೨ರಲ್ಲಿ ಒಂದು ಒಪ್ಪಂದಕ್ಕೆ ಬರಲಾಯಿತು. ಒಪ್ಪಂದದ ಮುಂದುವರಿಕೆಯಾಗಿ ೧೯೨೪ರಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಯಿತು. ೧೮೯೨ರ ಒಪ್ಪಂದವು ಮೈಸೂರು ಸಂಸ್ಥಾನವು ಮದ್ರಾಸ್ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ನೀರಾವರಿ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಹೇಳುತ್ತದೆ. ೧೯೨೪ರ ಒಪ್ಪಂದದ ಅನ್ವಯ ೧೯೩೧ರಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿದ ಕನ್ನಂಬಾಡಿಯ ಬಳಿ ೪೪.೮೩ ಟಿ.ಎಂ.ಸಿ. ಸಾಮರ್ಥ್ಯದ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ೧೯೩೪ರಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಮೆಟ್ಟೂರಿನಲ್ಲಿ ೯೩. ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲಾಯಿತು. ಎರಡೂ ಒಪ್ಪಂದಗಳು ಏಕಪಕ್ಷಿÃಯವಾಗಿದ್ದು ಮದ್ರಾಸ್ ಪ್ರಾಂತ್ಯದ ಪರವಾಗಿದ್ದವು. ೧೯೫೮ರಲ್ಲಿ ಕರ್ನಾಟಕವು ಹೇಮಾವತಿ, ಕಬಿನಿ, ಸುವರ್ಣಾವತಿ ಹಾಗೂ ಹಾರಂಗಿ ಯೋಜನೆಗಳನ್ನು ಆರಂಭಿಸಿದಾಗ ತಮಿಳುನಾಡು ಆಕ್ಷೆÃಪಣೆ ಎತ್ತಿತು. ೧೯೯೦ರಲ್ಲಿ ಭಾರತ ಸರ್ಕಾರವು ಕಾವೇರಿ ಜಲವಿವಾದ ನ್ಯಾಯ ಪಂಚಾಯಿತಿಯನ್ನು ರಚಿಸಿತು. ನ್ಯಾಯಮಂಡಳಿಯು ೧೯೯೧ರಲ್ಲಿ ಮಧ್ಯಂತರ ಆದೇಶ ನೀಡಿ ಕರ್ನಾಟಕವು ತಮಿಳುನಾಡಿಗೆ ೨೦೫ ಟಿ.ಎಂ.ಸಿ. ನೀರು ಬಿಡಬೇಕೆಂದು ಆದೇಶಿಸಿತು. ೨೦೦೭ರಲ್ಲಿ ಅಂತಿಮ ತೀರ್ಪು ನೀಡಿತು. ಲಭ್ಯವಿರುವ ೭೪೦ ಟಿ.ಎಂ.ಸಿ. ನೀರನ್ನು ಪರಿಸರ ಸಂರಕ್ಷಣೆಗಾಗಿ ೧೦ ಟಿ.ಎಂ.ಸಿ. ಹಾಗೂ ಸಮುದ್ರಕ್ಕೆ ಅನಿವಾರ್ಯವಾಗಿ ಹರಿದುಹೋಗುವ ಟಿ.ಎಂ.ಸಿ. ಹೊರತುಪಡಿಸಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗಳಿಗೆ ಕ್ರಮವಾಗಿ ೨೭೦, ೪೧೯, ೩೦ ಹಾಗೂ ಟಿ.ಎಂ.ಸಿ. ನೀರನ್ನು ಹಂಚಿತು. ಕಾವೇರಿಯ ಒಟ್ಟು ಹರಿವಿನಲ್ಲಿ ಶೇ. ೫೩.೮ರಷ್ಟು ಕೊಡುಗೆ ನೀಡುವ ಕರ್ನಾಟಕಕ್ಕೆ ಶೇ. ೩೩ರಷ್ಟು ಪಾಲು ಹಾಗೂ ಶೇ. ೩೧.೯ರಷ್ಟು ಪಾಲು ನೀಡುವ ತಮಿಳುನಾಡಿಗೆ ಶೇ. ೫೩ರಷ್ಟು ಪಾಲು ನೀಡುವ ಆದೇಶ ಅಸಮಾನತೆಯಿಂದ ಕೂಡಿದೆ. ವಸಾಹತುಶಾಹಿಯ ಕಾಲದಲ್ಲಿ ಮಾಡಿಕೊಳ್ಳಲಾದ ೧೮೯೨ ಹಾಗೂ ೧೯೨೪ರ ಒಪ್ಪಂದಗಳು ಸ್ವಾತಂತ್ರ್ಯಾನಂತರವೂ ಹೇಗೆ ಸಿಂಧುವಾಗುತ್ತವೆ ಎಂಬ ಅಂಶವನ್ನು ಪುಸ್ತಕದಲ್ಲಿ ಪ್ರಶ್ನಿಸಲಾಗಿದೆ.
-. ನಂ. ಜ್ಞಾನೇಶ್ವ