ಇತ್ತೀಚೆಗೆ ವಸಂತ ಪ್ರಕಾಶನ 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಿಸಿರುವ 'ರಮಣ ಮಹರ್ಷಿ' ಪುಸ್ತಕ ಓದಿದೆ. ಭಾವಾತಿರೇಕದಿಂದ ನನ್ನ ಕಣ್ಣಿನಲ್ಲಿ ನೀರು ಬಂತು. ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದಿರುವ ಈ ಕೃತಿ 82 ಪುಟಗಳನ್ನು ಹೊಂದಿದೆ. ಬೆಲೆ: ರೂ.30.
Friday, December 27, 2013
Tuesday, November 19, 2013
ಕನ್ನಡ ಹೆಸರುಗಳನ್ನು ಬರೆಯುವಾಗ ಆಗುವ ತಪ್ಪುಗಳು
ಕನ್ನಡ ಹೆಸರುಗಳನ್ನು ಬರೆಯುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು
ತಪ್ಪು - ಸರಿ
ಅನುಸೂಯ - ಅನಸೂಯ
ಆಂಜಿನಪ್ಪ - ಆಂಜನಪ್ಪ
ಕಾದ್ರೀಶ - ಕದ್ರೀಶ
ಜನಾರ್ಧನ - ಜನಾರ್ದನ
ದ್ರಾಕ್ಷಾಯಿಣಿ - ದಾಕ್ಷಾಯಿಣಿ
ಧನಂಜಯ್ಯ - ಧನಂಜಯ
ಮುರುಳಿ - ಮುರಳಿ
ಶೃತಿ - ಶ್ರುತಿ
ಸುಬ್ರಮಣ್ಯ - ಸುಬ್ರಹ್ಮಣ್ಯ
ಶುಶ್ಮಿತ - ಸುಸ್ಮಿತಾ
ಸುಶ್ಮಿತ - ಸುಸ್ಮಿತಾ
ಸುಷ್ಮಿತ - ಸುಸ್ಮಿತಾ
ಹಣಮಂತ - ಹನುಮಂತ
ಯಾಮಗಿರಯ್ಯ - ಹೇಮಗಿರಯ್ಯ
ತಪ್ಪು - ಸರಿ
ಅನುಸೂಯ - ಅನಸೂಯ
ಆಂಜಿನಪ್ಪ - ಆಂಜನಪ್ಪ
ಕಾದ್ರೀಶ - ಕದ್ರೀಶ
ಜನಾರ್ಧನ - ಜನಾರ್ದನ
ದ್ರಾಕ್ಷಾಯಿಣಿ - ದಾಕ್ಷಾಯಿಣಿ
ಧನಂಜಯ್ಯ - ಧನಂಜಯ
ಮುರುಳಿ - ಮುರಳಿ
ಶೃತಿ - ಶ್ರುತಿ
ಸುಬ್ರಮಣ್ಯ - ಸುಬ್ರಹ್ಮಣ್ಯ
ಶುಶ್ಮಿತ - ಸುಸ್ಮಿತಾ
ಸುಶ್ಮಿತ - ಸುಸ್ಮಿತಾ
ಸುಷ್ಮಿತ - ಸುಸ್ಮಿತಾ
ಹಣಮಂತ - ಹನುಮಂತ
ಯಾಮಗಿರಯ್ಯ - ಹೇಮಗಿರಯ್ಯ
Thursday, October 31, 2013
ರಾಜ್ಯೋತ್ಸವ ಪ್ರಶಸ್ತಿ
2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಕೋ.ಚೆನ್ನಬಸಪ್ಪ ಅವರಿಗೆ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪಿ.ಕಾಳಿಂಗರಾಯರೊಂದಿಗೆ ಹಾಡುತ್ತಿದ್ದ ಸೋಹನ್ ಕುಮಾರಿ ಅವರಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸೂಲಗಿತ್ತಿ ನರಸಮ್ಮನವರಿಗೆ ರಾಷ್ಟ್ರೀಯ ಹಿರಿಯ ನಾಗರಿಕ ಪ್ರಶಸ್ತಿ ಬಂದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ಒಮ್ಮೆ ಎಂ.ಪಿ.ಪ್ರಕಾಶ್ ಅವರು ರಾಮಕೃಷ್ಣ ಹೆಗಡೆ ಅವರ ಬಳಿ ಕುವೆಂಪು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಾರದಿರುವ ಸಂಗತಿಯನ್ನು ಪ್ರಸ್ತಾಪಿಸಿದರಂತೆ. ಆಗ ಹೆಗಡೆಯವರು, "ಯಾರಿಗೂ ಹೇಳಬೇಡಿ. ಈಗಾಗಲೇ ಅವರಿಗೆ ಎಂಥೆಂಥದೋ ಪ್ರಶಸ್ತಿಗಳೆಲ್ಲ ಬಂದಿವೆ. ಈಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಸರಿಯಾಗುವುದಿಲ್ಲ" ಎಂದರಂತೆ.

Wednesday, October 30, 2013
ಶಿಕ್ಷಕರ ನೇತ್ಯಾತ್ಮಕ ಮನೋಭಾವ
ವಿದ್ಯಾರ್ಥಿಯೊಬ್ಬ ತನ್ನ ಶಿಶ್ನದಿಂದ ಬಿಳಿ ದ್ರವ ಬರುತ್ತಿದೆ ಎಂದೂ, ತಾನು ವೈದ್ಯರ ಬಳಿ ಹೋಗಬೇಕೆಂದೂ ಶಿಕ್ಷಕರೊಬ್ಬರ ಬಳಿ ಹೇಳಿದ್ದಾನೆ. ಆ ಶಿಕ್ಷಕರು ಅವನ ಮುಗ್ಧತೆಯನ್ನು ಕಂಡು ನಗುತ್ತಿದ್ದರು. ಅವರಿಗೆ ಅದು ಗಂಭೀರ ವಿಷಯವಾಗಿ ಕಾಣಲಿಲ್ಲ. ಹಾಸ್ಯದ ವಸ್ತುವಿನಂತೆ ಕಂಡಿತು.
ಒಂದು ಹುಡುಗಿ ಶಾಲೆ ಬಿಟ್ಟಿದ್ದಳು. ಒಬ್ಬ ಶಿಕ್ಷಕರು ಹೇಳಿದರು, "ಆ ಹುಡುಗಿ ಶಾಲೆ ಬಿಟ್ಟದ್ದು ನನಗೆ ಖುಷಿ ಆಯಿತು!"
ಒಬ್ಬ ಹುಡುಗಿ ಅನೇಕ ಪ್ರಯತ್ನಗಳ ನಂತರ ಎಸ್‍ಎಸ್‍ಎಲ್‍ಸಿ ಪಾಸಾದಳು. ಒಬ್ಬ ಶಿಕ್ಷಕರೆಂದರು: "ಈ ಹುಡುಗಿ ಕಾಲೇಜಿಗೆ ಸೇರಿದರೆ ಮೂರು ಹುಡುಗರು ಫೇಲಾಗುತ್ತಾರೆ!"
ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೆ. ಒಬ್ಬ ಶಿಕ್ಷಕರೆಂದರು: "ಎಲ್ಲ ಹುಡುಗರಿಗೂ ಬರೆಯಲು ಹೇಳುತ್ತೀರಾ? ಸುಮ್ಮನೆ ಪೇಪರ್ ವೇಸ್ಟ್."
ಒಮ್ಮೆ ಪ್ರಾರ್ಥನಾ ಸಮಯದಲ್ಲಿ ಯಾರದೋ ಜನ್ಮದಿನವೆಂದು ಹೇಳುತ್ತಿದ್ದೆ. ಒಬ್ಬ ಶಿಕ್ಷಕರೆಂದರು: "ಇವಕ್ಕೆ ತಮ್ಮ ಜನ್ಮದಿನವೇ ಗೊತ್ತಿಲ್ಲ!"
ಶಾಲೆಯಲ್ಲಿ ಯಾವುದೋ ವಿಚಾರಕ್ಕೆ ತಂದೆ ತಾಯಿಗಳೇ ಮಗಳು ಯಾರನ್ನೋ ಪ್ರೀತಿಸಿದಳೆಂಬ ಕಾರಣಕ್ಕೆ ವರ್ಷಗಟ್ಟಲೆ ಕೂಡಿಹಾಕಿದ್ದ ವಿಚಾರ ಪ್ರಸ್ತಾಪಿಸಿದೆ. ಒಬ್ಬ ಶಿಕ್ಷಕರೆಂದರು: "ಅದರಲ್ಲೇನಿದೆ? ಮರ್ಯಾದೆ ಹೋಗುತ್ತೆ ಅಂತ ಕೂಡಿಹಾಕಿದ್ದಾರೆ."

ನಾಲ್ಕು ವರ್ಷದ ಹಿಂದೆ ಹುಡುಗ ಹುಡುಗಿ ಪ್ರೇಮಪತ್ರ ವಿನಿಮಯ ಮಾಡಿಕೊಂಡರು. ಶಿಕ್ಷಕರು ಕರೆದು ಬುದ್ಧಿ ಹೇಳಿದರು. ಅವರು ಒಬ್ಬರನ್ನೊಬ್ಬರು ಮರೆತೂ ಬಿಟ್ಟರು. ಆದರೆ ಶಿಕ್ಷಕರು ಆ ಪ್ರೇಮಪತ್ರಗಳನ್ನೋದುತ್ತ ಇನ್ನೂ ಚಪ್ಪರಿಸುತ್ತಲೇ ಇದ್ದಾರೆ.
Sunday, October 27, 2013
ಸೂರ್ಯಾಸ್ತ
ಇಂದು ತುರುವೇಕೆರೆಯ ಬಳಿಯಿರುವ ಬದರಿಕಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಸಂಸ್ಥಾಪಕರ
ದಿನಾಚರಣೆಯನ್ನು ಆಚರಿಸಲಾಯಿತು. ಅಲ್ಲಿಂದ ಬರುತ್ತ ಸೂರ್ಯಾಸ್ತವನ್ನು ನೋಡಿದೆ.
ಸೂರ್ಯಾಸ್ತ ನೋಡಿ ವರ್ಷಗಳೇ ಆಗಿತ್ತು.
ಕಥೆ ಕೇಳುವ ಹಂಬಲ
ಇಂದು ಬದರಿಕಾಶ್ರಮದಿಂದ ಒಂದೆರಡು ಪುಸ್ತಕಗಳನ್ನು ತಂದಿದ್ದೆ. ಅವುಗಳಲ್ಲಿ ಒಂದು 'ಮಕ್ಕಳ ರಾಮಕೃಷ್ಣ'. ಆ ಪುಸ್ತಕವನ್ನು ಓದಿ ಹೇಳುವಂತೆ ನನ್ನ ಮಗ(ಎರಡನೆಯ ತರಗತಿಯಲ್ಲಿ ಓದುತ್ತಿದ್ದಾನೆ) ದುಂಬಾಲು ಬಿದ್ದ. ಪುಸ್ತಕವನ್ನು ಪೂರ್ತಿ ಓದಿ ಹೇಳುವವರೆಗೂ ಬಿಡಲಿಲ್ಲ. ಅನುಪಮಾ ನಿರಂಜನ ಅವರ 'ದಿನಕ್ಕೊಂದು ಕಥೆ'ಯ ಹನ್ನೆರಡು ಸಂಪುಟಗಳನ್ನೂ ತಂದಿಟ್ಟಿದ್ದೇನೆ. ಅದರಲ್ಲಿಯ ಕಥೆಗಳನ್ನು ತನ್ನ ತಾಯಿಯಿಂದ ಆಗಾಗ ಓದಿಸಿಕೊಂಡು ಕೇಳುತ್ತಿರುತ್ತಾನೆ.
ಕನ್ನಡ ಪದಗಳ ಸರಿಯಾದ ರೂಪ
ಕನ್ನಡ ಪದಗಳನ್ನು ಬರೆಯುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳು
ತಪ್ಪು ರೂಪ - ಸರಿಯಾದ ರೂಪ
ಅನಾನುಕೂಲ - ಅನನುಕೂಲ
ಅನಾವಶ್ಯಕ - ಅನವಶ್ಯಕ
ಆಧ್ಯಾತ್ಮ - ಅಧ್ಯಾತ್ಮ
ಉಪಹಾರ - ಉಪಾಹಾರ
ಕೂಲಂಕುಷ - ಕೂಲಂಕಷ
ಕೋಟ್ಯಾನುಕೋಟಿ-ಕೋಟ್ಯನುಕೋಟಿ
ಜಯಂತ್ಯೋತ್ಸವ - ಜಯಂತ್ಯುತ್ಸವ
ಜಾತ್ಯಾತೀತ - ಜಾತ್ಯತೀತ
ತಲುಪು - ತಲಪು
ಧಾಳಿ - ದಾಳಿ
ಧೃಡ - ದೃಢ
ಮಾಂಸಹಾರಿ - ಮಾಂಸಾಹಾರಿ
ಭಾದೆ - ಬಾಧೆ
ಶಾಖಾಹಾರಿ - ಶಾಕಾಹಾರಿ
ಶುಭಾಷಯ - ಶುಭಾಶಯ
ಸಸ್ಯಹಾರಿ - ಸಸ್ಯಾಹಾರಿ
ತಪ್ಪು ರೂಪ - ಸರಿಯಾದ ರೂಪ
ಅನಾನುಕೂಲ - ಅನನುಕೂಲ
ಅನಾವಶ್ಯಕ - ಅನವಶ್ಯಕ
ಆಧ್ಯಾತ್ಮ - ಅಧ್ಯಾತ್ಮ
ಉಪಹಾರ - ಉಪಾಹಾರ
ಕೂಲಂಕುಷ - ಕೂಲಂಕಷ
ಕೋಟ್ಯಾನುಕೋಟಿ-ಕೋಟ್ಯನುಕೋಟಿ
ಜಯಂತ್ಯೋತ್ಸವ - ಜಯಂತ್ಯುತ್ಸವ
ಜಾತ್ಯಾತೀತ - ಜಾತ್ಯತೀತ
ತಲುಪು - ತಲಪು
ಧಾಳಿ - ದಾಳಿ
ಧೃಡ - ದೃಢ
ಮಾಂಸಹಾರಿ - ಮಾಂಸಾಹಾರಿ
ಭಾದೆ - ಬಾಧೆ
ಶಾಖಾಹಾರಿ - ಶಾಕಾಹಾರಿ
ಶುಭಾಷಯ - ಶುಭಾಶಯ
ಸಸ್ಯಹಾರಿ - ಸಸ್ಯಾಹಾರಿ
Subscribe to:
Posts (Atom)